Rishabh Shetty : ಈ ದಿನದಿಂದ ರಿಷಬ್ ಶೆಟ್ಟಿ ಅವರ ಫೋನ್ ಆಫ್ ಆಗಲಿದೆ..!! ಕಾರಣವೇನು..??
ಕಾಂತಾರ…. ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್ ನಲ್ಲಿ ಬ್ಯುಸಿಯಾಗಿದ್ದಾರೆ..
ಈ ನಡುವೆ ರಿಷಬ್ ಶೆಟ್ಟಿಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಕೂಡ ಒಲಿದು ಬಂದಿದೆ..
ಇತ್ತೀಚೆಗೆ ಮಾರ್ಚ್ ನಿಂದ ಕಾಂತಾರ 2 ಶೂಟಿಂಗ್ ಶುರು ಮಾಡುವ ಬಗ್ಗೆ ರಿಷಬ್ ಮಾಹಿತಿ ನೀಡಿದ್ದರು..
ಹಾಗಾಗಿ ಮಾರ್ಚ್ ನಿಂದ ಮೊಬೈಲ್ ಆಫ್ ಮಾಡಿಕೊಂಡು, ಕಥೆ ಬರೆಯುವುದರಲ್ಲಿ ಬ್ಯುಸಿಯಾಗುವೆ ಅಂದಿದ್ದಾರೆ.
ಮುಂದಿನ ಕಾಂತಾರ ಸಿನಿಮಾಗಾಗಿ ಅವರು ಈಗಾಗಲೇ ಸಂಶೋಧನೆ ಮಾಡುತ್ತಿದ್ದಾರೆ. ತಮ್ಮದೇ ಸುತ್ತ ಮುತ್ತಲಿನ ಊರುಗಳಿಗೆ, ಕಾಡು ಮೇಡುಗಳಿಗೆ ಅಲೆದು ಕಥೆ ಹುಡುಕುತ್ತಿದ್ದಾರೆ.
ಈಗಾಗಲೇ ಅವರೇ ಹೇಳಿದಂತೆ, ಕಾಂತಾರ ಸಿನಿಮಾದ ಮುಂದುವರೆದ ಭಾಗ ಬರುವುದಿಲ್ಲವಂತೆ. ಅದಕ್ಕಿಂತ ಮುಂಚಿನ ಕಥೆಯನ್ನು ಕಾಂತಾರ 2 ಚಿತ್ರದಲ್ಲಿ ಹೇಳಲಿದ್ದಾರಂತೆ.
Rishabh Shetty , kantara hero’s phone will be off from march , what’s the reason