Nawazuddin Siddiqui : ನಟ ನವಾಜ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ ಪತ್ನಿ..!!
ಬಾಲಿವುಡ್ ನ ವರ್ಸಟೈಲ್ ನಟ ನವಾಜುದ್ದೀನ್ ಸಿದ್ಧಿಕಿ ಹಾಗೂ ಪತ್ನಿ ಆಲಿಯಾ ನಡುವೆ ಮುಂಚೆ ಇಂದಲೂ ಸರಿಯಾದ ಸಂಬಂಧವಿಲ್ಲ.. ಆಗಾಗ ರಾದ್ಧಾಂತಗಳನ್ನ ಮಾಡಿಕೊಂಡಿದ್ದಾರೆ.
ಈಗ ನವಾಜುದ್ದೀನ್ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅನೇಕ ವಿಚಾರಗಳನ್ನ ಹಂಚಿಕೊಂಡು ಆರೋಪಗಳನ್ನ ಮಾಡಿದ್ದಾರೆ..
“ ತಮ್ಮ ಮಕ್ಕಳನ್ನು ನವಾಜುದ್ದೀನ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಮುಂದೆ ತಾವು ಮಹಾನ್ ವ್ಯಕ್ತಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನನಗೆ ತುಂಬಾ ಹಿಂಸೆಯನ್ನೂ ನೀಡಿದ್ದಾರೆ. ಹಾಗಾಗಿ ನಾನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಮಕ್ಕಳನ್ನು ಅವನಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
“ ಹುಟ್ಟಿದಾಗಿಂದ ಈವರೆಗೂ ಮಕ್ಕಳ ಬಗ್ಗೆ ಕಾಳಜಿ ತೋರಿಸದೇ ಇರುವವನು, ಈಗೇಕೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ಅರ್ಥವಾಗುತ್ತಿಲ್ಲ. ನನ್ನಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ದೂರ ಮಾಡುವುದಕ್ಕೆ ಆಗುವುದಿಲ್ಲ “ ಎಂದು ಹೇಳಿಕೊಂಡಿದ್ದಾರೆ.
Nawazuddin Siddiqui : nawaz’s wife file’s Rape Case againts him