Kabza Trailer Review : KGF ಕಾಪಿನಾ..??? ಮುಟ್ಟಿನೋಡಿಕೊಳ್ಳೋ ಉತ್ತರ..!!
ಆರ್. ಚಂದ್ರು ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೇಲರ್ ಚಿಂದಿಯಾಗಿದೆ..
ಅದ್ರಲ್ಲಿ ನೋ ಡೌಟ್ ,, ಉಪೇಂದ್ರ , ಕಿಚ್ಚನ ಅಪಿಯರೆನ್ಸ್ , ಅದು ಬೇರೆ ಲೆವೆಲ್ … ಟ್ರೇಲರ್ ಕಿಚ್ಚ , ಉಪ್ಪಿ ಫ್ಯಾನ್ಸ್ ನಿರೀಕ್ಷೆ ಮುಟ್ಟಿದೆ.
ಮತ್ತೊಂದೆಡೆ ಶಿವಣ್ಣನ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ..
ಐಮ್ ಗೆಟ್ಟಿಂಗ್ ಒನ್ ಬ್ಲಡಿ ಇಂಡಿಯನ್ ಟು ಕಿಲ್ ಅನದರ್ ಬ್ಲಡಿ ಇಂಡಿಯನ್…
ಬ್ರಿಟೀಷನೊಬ್ಬ ಈ ಡೈಲಾಗ್ ಹೊಡೆಯುತ್ತಿದ್ದ ಹಾಗೆ ಬಂದೂಕು ಹಿಡಿದು ನೆದುಕೊಂಡು ಹೋಗೋ ಒಬ್ಬರ ಗ್ಲಿಂಪ್ಸ್ ತೋರಿಸಲಾಗಿದೆ ಟೀಸರ್ ನಲ್ಲಿ..
ಅವರು ಕಿಚ್ಚ ಸುದೀಪ್ ಅಲ್ಲ , ಉಪೇಂದ್ರನೂ ಅಲ್ಲ ನೋ ಡೌಟ್ ಅವರು ಶಿವರಾಜ್ ಕುಮಾರೇ ಅಂತಿದ್ದಾರೆ ಫ್ಯಾನ್ಸ್..
ಒಂದೊಮ್ಮೆ ಅವರು ಶಿವಣ್ಣನೇ ಆಗಿದ್ದಲ್ಲಿ ಈ ಸೀನ್ ಥಿಯೇಟರ್ ನಲ್ಲಿ ನೆಕ್ಸ್ಟ್ ಲೆವೆಲ್ ಫೀಲ್ ಕೊಡಲಿದೆ..
ಇಡೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ರೆಕಾರ್ಡ್ ಬ್ರೇಕರ್ ಸಾಬೀತಾಗುವ ಅವಕಾಶ ಇದೆ..
ಚಿತ್ರದ ಕ್ವಾಲಿಟಿ, ವಿಶೂಯಲ್ , BGM, ಎಲ್ಲವೂ ವ್ಹಾವ್ ಎನಿಸುವಷ್ಟು ಅದ್ಭುತವಾಗಿದೆ.
ಉಪ್ಪಿ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿರೋದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ..
ಮೊದಲಿಗೆ ಹಿಂದಿಯಲ್ಲಿ ಟ್ರೈಲರ್ ಅನ್ನ ರಿಲೀಸ್ ಮಾಡಲಾಯಿತು. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕಬ್ಜಾ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದಾರೆ. ಕನ್ನಡ ಮತ್ತು ಬೇರೆ ಭಾಷೆಯಗಳಲ್ಲಿ ತಡರಾತ್ರಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ.
ಅಂದ್ಹಾಗೆ ಕಬ್ಜಾ ಟಿಸರ್ ಬಂದಾಗ ಇದನ್ನ ಇನ್ನೊಂದು ಕೆಜಿಎಫ್ ಅಂತನೇ ಟೀಕೆ ಮಾಡಲಾಗಿತ್ತು.. ಸೀನ್ ಟು ಸೀನ್ ಹೋಲಿಕೆ ಮಾಡಿ ಕೆಜಿಎಫ್ ಕಾಪಿ ಎಂದೇ ಮಾತನಾಡಲಾಗಿತ್ತು..
ಹೀಗಾಗಿ ಟ್ರೇಲರ್ ಕೂಡ ಕೆಜಿಎಫ್ ನಂತೆಯೇ ಇರಲಿದೆ,,,
ಎಂದು ಅಂದುಕೊಂಡಿದ್ದವರ ಬಾಯಿ ಮುಚ್ಚಿಸಿದೆ ಕಬ್ಜಾ ಟ್ರೇಲರ್…
ಟ್ರೇಲರ್ ಮೂಲಕ ಸಖತ್ ಉತ್ತರವನ್ನೇ ಕೊಟ್ಟಿದೆ..
ಯಾಕಂದ್ರೆ ಕಬ್ಜಾ ಟ್ರೇಲರ್ ನೋಡಿದ್ರೆ , ಯಾವೊಂದು ಆಂಗಲ್ ನಿಂದಲೂ ಕೂಡ ಇದು KGF ಅನಿಸೋದಿಲ್ಲ , ಟೀಸರ್ KGF ವೈಬ್ ಕೊಟ್ಟಿತ್ತು ಆದ್ರೆ ಟ್ರೇಲರ್ ಕಂಪ್ಲೀಟ್ ಡಿಫರೆಂಟ್ ಕಹಾನಿಯನ್ನೇ ವತೋರಿಸುತ್ತಿದೆ..
ಎಲ್ಲೆಲ್ಲೂ ಕೂಡ KGF ರೀತಿ ಅಂತ ಸಿನಿಮಾ ಅನಿಸಿದ್ದಿಲ್ಲ.. ಇದೊಂದು ಬೇರೆಯ ದಿಕ್ಕಲ್ಲೇ ಸಾಗುತ್ತಿರುವ ಕಥೆ, ಪ್ಯಾನ್ ಇಂಡಿಯನ್ ಸಿನಿಮಾ.. ಈಗ ಮತ್ತೊಮ್ಮೆ ಇಂಡಿಯನ್ ಫಿಲಮ್ ಇಂಡಸ್ಟ್ರಿಯನ್ನ ಶೇಕ್ ಮಾಡಲು ಸಜ್ಜಾಗ್ತಿದೆ..
ಅದ್ರಲ್ಲೂ KGF , KGF 2 , ಚಾರ್ಲಿ , ವಿಕ್ರಾಂತ್ ರೋಣ , ಕಾಂತಾರ ನಂತರ ಇತ್ತೀಚೆಗೆ ರಿಲೀಸ್ ಆದ ಮಾರ್ಟಿನ್ ಟೀಸರ್ ಬಾಲಿವುಡ್ ಮೈನರ್ ಶಾಕ್ ಕೊಟ್ಟರೆ ಕಬ್ಜಾ ಬಾಲಿವುಡ್ ನೇ ಶೇಕ್ ಮಾಡೋ ರೇಂಜ್ ಗೆ ಸೌಂಡ್ ಮಾಡ್ತಿದೆ ಅನ್ನೋದ್ರಲ್ಲಿ ನೋ ಡೌಟ್..
ಕನ್ನಡ ಸಿನಿಮಾಗಳನ್ನ ಇನ್ಮುಂದೆ ಅಂಡರೆಸ್ಟಿಮೇಟ್ ಮಾಡೋ ಯೋಚನೆ ಮಾಡೋಕು ಹೆದರಬೇಕು , ಆ ಲೆವೆಲ್ ನಮ್ಮ ಕನ್ನಡ ಇಂಡಸ್ಟ್ರಿ ಸೌಂಡ್ ಮಾಡ್ತಿದೆ..
ನಿಜ…!!!
ದಿಸ್ ಈಸ್ ದ ನೆಕ್ಸ್ಟ್ ಬಿಗ್ ತಿಂಗ್ ಇನ್ ಇಂಡಿಯಾ..!!!
ಅವರು ಕೇವಲ ಹೇಳ್ತಿಲ್ಲಾ , ನಮಗೆ ಇದನ್ನ ಒಪ್ಪದೇ ಬೇರೆ ಆಪ್ಷನ್ ಇಲ್ಲ..
ಯಾಕಂದ್ರೆ ಇದು ಭಾರತ ಸಿನಿಮಾ ಇಂಡಸ್ಟ್ರಿಯೇ ಕಾಯುತ್ತಿರುವ ಸಿನಿಮಾ ಲಿಸ್ಟ್ ಸೇರಾಗಿದೆ.. ನೋ ಡೌಟ್..
3 ನಿಮಿಷದ ಟ್ರೇಲರ್ ನಲ್ಲಿ ಎಮೋಷನ್ಸ್ ನ ಅಚ್ಚುಕ್ಟಾಗಿ ಕ್ಯಾರಿ ಮಾಡಲಾಗಿದೆ.. ಕಿಚ್ಚನ ಖಡಕ್ ಲುಕ್ ಥ್ರಿಲ್ ಕೊಟ್ರೆ , ಉಪ್ಪಿ ಮಾಸ್ ಅಂಡ್ ಕ್ಕಾಸ್ ಅವತಾರ ಇನ್ನಷ್ಟು ಕಾತರತೆ ಹೆಚ್ಚಿಸುತ್ತೆ..
ಆಕ್ಷನ್ ಸೀನ್ಸ್ ಜೊತೆಗೆ ಆಡಿಯನ್ಸ್ ನಿರೀಕ್ಷೆ ಮಾಡುವ ಎಲ್ಲ ಎಲಿಮಿಂಟ್ಸ್ ಇದೆ.. ಆದ್ರೂ ಟ್ರೇಲರ್ ನಲ್ಲಿ ಎಲ್ಲೂ ಕೂಡ ಸಿನಿಮಾದ ಕಥೆ ಗೊತ್ತೇ ಆಗದ ಹಾಗೆ ಸಸ್ಪೆನ್ಸ್ ಮೇಂಟೇನ್ ಮಾಡಲಾಗಿದೆ..
ಸ್ಕ್ರೀನ್ ಪ್ಲೇ , ಬಿಜಿಎಮ್ ಅದ್ಭುತವಾಗಿದೆ..
ಇತಿಹಾಸ ಯಾವಾಗಲೂ ಉರುಳಿರುವ ತಲೆಗಳಿಗಿಂತ ಕತ್ತರಿಸಿರುವ ಕೈಗಳನ್ನೇ ಕೊಂಡಾಡೋದು. ಅಂತಹ ಕೈಯಿಂದ ಕೈಯಿಂದ ಸೃಷ್ಟಿಯಾಗಿರುವ ಚರಿತ್ರೆನೇ ಕಬ್ಜ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಜೊತೆಗೆ ಶುರುವಾಗೋ ಟ್ರೈಲರ್ ಆರಂಭದಲ್ಲೇ ಕಿಚ್ಚು ಹೆಚ್ಚಿಸಿಬಿಟ್ಟಿದೆ..
ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನೂ ಕಬ್ಜಾ ಕಾರುಬಾರು ಶುರುವಾಗಲಿದೆ..
ಒಟ್ಟಾರೆ ಮೊದಲ ನೋಟದಲ್ಲೇ ಕಬ್ಜ ಟ್ರೈಲರ್ ಸಿನಿರಸಿಕರ ಮನಗೆದ್ದಿದೆ. ಸಂಜೆ 5 ಗಂಟೆಗೆ ರಿಲೀಸ್ ಆಗಬೇಕಿದ್ದ ಟ್ರೇಲರ್ ತಡರಾತ್ರಿ ಕನ್ನಡದಲ್ಲಿ ರಿಲೀಸ್ ಆಗಿದೆ..
ಟೀಸರ್ ಮೊದಲಿಗೆ ಸಂಜೆ 7 ಗಂಟೆಗೆ ಹಿಂದಿಯಲ್ಲಿ ರಿಲೀಸ್ ಆಗಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕನವ್ನಡದಲ್ಲಿ ರಿಲೀಸ್ ಆಯ್ತು.. ಆದ್ರೆ ತಡವಾಗಿ ರಿಲೀಸ್ ಆಗಿದ್ದರಿಂದ ಸಿಟ್ಟಾಗಿದ್ದ ಫ್ಯಾನ್ಸ್ ಟ್ರೇಲರ್ ನೋಡಿ ಸಮಾಧಾನಗೊಂಡಿದ್ದಾರೆ..
ಟ್ರೇಲರ್ ಗೂಸ್ ಬಂಪ್ಸ್ ಫೀಲ್ ಕೊಡುತ್ತೆ.. ಹೃದಯ ಬಡಿತ ಹೆಚ್ಚಿಸುತ್ತೆ,, ಕೊನೆವರೆಗೂ ಥ್ರಿಲ್ ಕೊಡುತ್ತದೆ..
ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎನ್ನುವ ಟಾಕ್ ಶುರುವಾಗಿದೆ. ಆರ್. ಚಂದ್ರು ವಿಷನ್, ಮೇಕಿಂಗ್, ರಿಚ್ ವಿಷ್ಯುವಲ್ಸ್, ಹ್ಯೂಜ್ ಸೆಟಪ್ಸ್, ಉಪ್ಪಿ, ಕಿಚ್ಚನ ಆರ್ಭಟ, ರವಿ ಬಸ್ರೂರು ಪವರ್ ಫುಲ್ ಬಿಜಿಎಂ ಸಖತ್ ಕಿಕ್ ಕೊಡ್ತಿದೆ.
ಕಿಚ್ಚನ ಒಂದೊಂದು ಡೈಲಾಗ್ ಅಭಿಮಾನಿಗಳನ್ನ ರೋಮಾಂಚನಗೊಳಿಸುತ್ತದೆ..
ರಾಣಿ ಮಧುಮತಿಯಾಗಿ ಶ್ರೀಯಾ ಮೋಡಿ ಮಾಡುತ್ತಾರೆ. ಇನ್ನು ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ದೇವ್ ಗಿಲ್, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಡಾನ್ಗಳಾಗಿ ಅಬ್ಬರಿಸಿದ್ದಾರೆ.
ಮಾರ್ಚ್ 17ಕ್ಕೆ ‘ಕಬ್ಜ’ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದೆ.