RRR : KGF 2 ಪ್ರಸ್ತಾಪಿಸಿ RRR ಲೇವಡಿ ಮಾಡಿದ ತಮ್ಮಾರೆಡ್ಡಿ..!! ಆಸ್ಕರ್ ಗಾಗಿ 80 ಕೋಟಿ ಸುರಿದ್ರಾ ರಾಜಮೌಳಿ..??
RRR ಸಿನಿಮಾ ಬಾಕ್ಸ್ ಆಪೀಸ್ ಶೇಕ್ ಮಾಡಿ 2022 ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿತ್ತು..
ಅಷ್ಟೇ ಅಲ್ಲದೇ ಆಸ್ಕರ್ ರೇಸ್ ನಲ್ಲಿರುವ ಈ ಸಿನಿಮಾ ಈಗಾಗಲೇ ಅಂತರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನ ಬಾಚಿಕೊಳ್ಳುವ ಮೂಲಕ ಈಗಾಗಲೇ ವಿಶ್ವಾದ್ಯಂತ ಗಮನ ಸೆಳೆಯುತ್ತಿದೆ..
ಆದ್ರೆ ಇದೀಗ ಸಿನಿಮಾ ಆಸ್ಕರ್ ರೇಸ್ ಗೆ ಆಯ್ಕೆಯಾಗಿರೋದಕ್ಕೆ ನಿರ್ದೇಶಕ ತಮ್ಮಾರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ..
ಒಂದೆಡೆ ಆಸ್ಕರ್ ಪ್ರಶಸ್ತಿ ಗೆದ್ದೇ ಗೆಲ್ತೇವೆ ಎಂಬ ಧಾವಂತದಲ್ಲಿ RRR ಟೀಮ್ ಇದೆ..
ಮಾರ್ಚ್ 12 ರಂದು ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಕಾರ್ಯಕ್ರಮ ನಡೆಯಲಿದೆ.. ಈ ವೇದಿಕೆ ಮೇಲೆ ರಾಮ್ ಚರಣ್ ಹಾಗೂ ಜ್ಯೂ. NTR ಇಬ್ಬರೂ ಕೂಡ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ..
ಆದ್ರ ಇದೀಗ RRR ಸಿನಿಮಾತಂಡದ ವಿರುದ್ಧ ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ಕಿಡಿಕಾರಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ಪಡೆಯಲು RRR ಚಿತ್ರದ ನಿರ್ದೇಶಕ ರಾಜಮೌಳಿ ಬರೋಬ್ಬರಿ 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಮೊತ್ತದಲ್ಲಿ ನಾನು ಹತ್ತು ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದ್ರಲ್ಲಿ ಈ ಬಗ್ಗೆ ಮಾತನಾಡಿದ ಅವರು ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. 80 ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ವೈರಲ್ ಆಗ್ತಿದ್ದು , ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ..
ಅಷ್ಟೇ ಅಲ್ಲ ಈ ವೇಳೆ KGF ಬಗ್ಗೆಯ ಪ್ರಸ್ತಾವನೆ ಮಾಡಿರುವ ತಮ್ಮಾರೆಡ್ಡಿ ಅವರು ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಆಸ್ಕರ್ ಪ್ರಶಸ್ತಿಗಾಗಿ RRR 80 ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ 20 ಕೋಟಿ ಸೇರಿಸಿದ್ದರೆ ಮತ್ತೊಂದು ಕೆಜಿಎಫ್ ಮಾದರಿಯ ಚಿತ್ರ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದ್ದಾರೆ..
RRR : Tammareddy teased RRR by proposing KGF 2..!! 80 crore Suridra Rajamouli for Oscar..??