RRR : ಆಸ್ಕರ್ ಕ್ರೆಡಿಟ್ ಕದಿಯೋಕೆ ಹೊರಟಿದ್ಯಾ ಬಾಲಿವುಡ್..??
RRR ಸಿನಿಮಾ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಆಸ್ಕರ್ಸ್ ಗೆದ್ದಿದೆ. ಅಷ್ಟೇ ಅಲ್ಲ ಭಾರತದ ‘ ದಿ ಎಲಿಫೆಂಟ್ ವಿಸ್ಪರರ್ಸ್ ‘ ಸಾಕ್ಷ್ಯ ಚಿತ್ರವವೂ ಕೂಡ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಭಾರತಕ್ಕೆ ಅದ್ರಲ್ಲೂ ಸೌತ್ ಇಂಡಿಯನ್ಸ್ ಹೆಮ್ಮೆಯ ವಿಚಾರವಿದು..
ವಿಶ್ವಾದ್ಯಂತ ಸೌತ್ ಸಿನಿಮಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರೇ ರಾಜಮೌಳಿ ಟೀಮ್ ಗೆ ಹಾಗೂ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇವೆರೆಡೂ ಪ್ರಶಸ್ತಿಗಳೂ ಕೂಡ ಒಲಿದು ಬಂದಿರುವುದು ಸೌತ್ ಸಿನಿಮಾಗಳಿಗೆ ಎಂಬುದು ಗಮನಿಸಲೇಬೇಕಾದ ವಿಚಾರವೇ ಆದ್ರೂ ಅದ್ಯಾಕೋ ಬಾಲಿವುಡ್ ಗೆ ಸಹಿಸೋದಕ್ಕೆ ಆಗುತ್ತಿಲ್ಲ ಎಂಬಂತೆ ಕಾಣಿಸುತ್ತಿದೆ.
ಆದ್ರೆ ಸೌತ್ ಸಿನಿಮಾಗಳನ್ನೇ ಕಾಪಿ ಇಳಿಸುತ್ತಿರುವ ಬಾಲಿವುಡ್ ಮಂದಿ ಅದ್ಯಾಕೋ ಮೌನವಾಗಿದ್ದಾರೆ..
ಹೀಗಾಗಿ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಸೋ ಕಾಲ್ಡ್ ಬಾಲಿವುಡ್ ಮಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ಸಿನಿಮಾ ಇಂಡಸ್ಟ್ರಿ ಅಂದ್ರೆ ಬಾಲಿವುಡ್ ಅಂತ ಬಿಲ್ಡ್ ಕೊಡ್ತಿದ್ದ ಟೈಮ್ ಈಗ ಇಲ್ಲ , ಈಗೇನಿದ್ರೂ ಸೌತ್ ಸಿನಿಮಾಗಳ ಜಮಾನ ಅಂತಿದ್ದಾರೆ ನೆಟಿಜನ್ಸ್.
ಇದೆಲ್ಲದರ ನಡುವೆ ಬಾಲಿವುಡ್ ಈಗ ಆಸ್ಕರ್ ಕ್ರೆಡಿಟ್ ಕದಿಯೋ ಪ್ರಯತ್ನ ಮಾಡ್ತಿದೆ ಎಂದೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದ್ದು , ಬಾಲಿವುಡ್ ನ ಬುದ್ದಿಗೆ ಬಾಯಿಗೆ ಬಂದಹಾಗೆ ಬೈತಿದ್ದಾರೆ ನೆಟ್ಟಿಗರು..
ಇತ್ತ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬಾಲಿವುಡ್ ನ ಹಿರಿಯ ನಟಿ ಕಮ್ ರಾಜಕಾರಣಿ ಜಯಾ ಬಚ್ಚನ್ ಈ ಬಗ್ಗೆ ಮಾತನಾಡಿದ ನಂತರ ಸೌತ್ vs ಬಾಲಿವುಡ್ ಚರ್ಚೆಗೆ ಗ್ರಾಸವಾಗಿತ್ತು..
ಆಸ್ಕರ್ಸ್ ಗೆಲುವಿನ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾದಾಗ ಬಾಲಿವುಡ್ VS ಸೌತ್ ವಾದಕ್ಕೆ ತಿರುಗಿದೆ. ಜಯಾ ಬಚ್ಚನ್ ದೇಶದ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದು, ಅವರಿಂದಲೇ ಹೊರ ದೇಶಗಳ ಜನರು ನಮ್ಮನ್ನು ಗುರುತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದು ಆರಂಭವಷ್ಟೇ, ಸಿನಿಮಾದ ಮಾರುಕಟ್ಟೆ ಇರುವುದು ಅಮೆರಿಕದಲ್ಲಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡರು. ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಭಾರತದ ಗೆಲುವು ಎಂದು ಹಲವಾರು ರಾಜ್ಯಸಭಾ ಸಂಸದರು ಒಪ್ಪಿಕೊಂಡರು, ಕೆಲವರು ಇದು ಸಂಪೂರ್ಣವಾಗಿ ದಕ್ಷಿಣ ಭಾರತದ ಗೆಲುವು ಎಂದು ಹೇಳಿದ್ದಾರೆ.
ಆರ್ ಆರ್ ಆರ್ ಗಿಂತಲೂ ಮೊದಲು ಅತ್ಯುತ್ತಮ ಗೀತೆ ಪ್ರಶಸ್ತಿಯನ್ನು ತಮಿಳುನಾಡಿನ ಎ.ಆರ್ ರೆಹಮಾನ್ ಸ್ವೀಕರಿಸಿದ್ದಾರೆ ಎಂದು ಎಂಡಿಎಂಕೆ ನಾಯಕ ವೈಕೊ ವಿಧಾನಸಭೆಗೆ ತಿಳಿಸಿದಾಗ ಜಯಾ ಬಚ್ಚನ್ ಹೇಳಿಕೆ ಬಾಲಿವುಡ್ ವಿರುದ್ಧ ದಕ್ಷಿಣದ ಚರ್ಚೆಯನ್ನು ಹುಟ್ಟುಹಾಕಿತು. ಅಲ್ಲದೆ, RRR ತೆಲುಗು ಭಾಷೆಯ ಚಲನಚಿತ್ರವಾಗಿದ್ದು, ನಾಟು ನಾಟು ಜನಪ್ರಿಯ ತೆಲುಗು ಟ್ರ್ಯಾಕ್ ಆಗಿದೆ ಎಂದರು.
ಎಐಎಡಿಎಂಕೆ ನಾಯಕ ಎಂ ತಂಬಿ ದುರೈ ಅವರು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ದಿ ಎಲಿಫೆಂಟ್ ವಿಸ್ಪರರ್ಸ್ ತಮಿಳುನಾಡಿನ ಊಟಿಯಲ್ಲಿದೆ ಎಂದು ಹೇಳಿದರು.
RRR : Is Bollywood out to steal Oscar credit..??