Surya – Jyothi : 70 ಕೋಟಿ ಮೌಲ್ಯದ ದುಬಾರಿ ಮನೆ ಖರೀದಿಸಿದ ಸೂರ್ಯ ಜ್ಯೋತಿಕಾ..!!
ಸೌತ್ ನ ಸ್ಟಾರ್ ಜೋಡಿಗಳಲ್ಲಿ ಒಂದು ಜ್ಯೋತಿಕಾ ಹಾಗೂ ಸೂರ್ಯ ದಂಪತಿ.. ಇದೀಗ ಈ ದಂಪತಿ ದುಬಾರಿ ಬೆಲೆಯ ಮನೆ ಖರೀದಿಸಿದ್ದು , ಇದರ ಬೆಲೆ ಕೇಳಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ..
ಸೂರರೈ ಪೊಟ್ರು, ಜೈ ಭೀಮ್ ಚಿತ್ರಗಳ ಮೂಲಕ ಸೂರ್ಯ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದರೆ, ಜ್ಯೋತಿಕಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಇದೀಗ ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ಮೊತ್ತದ ಅಪಾರ್ಟ್ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಸುದ್ದಿ ಸಿನಿಮಾರಂಗದಲ್ಲಿ ಗಿರಕಿ ಹೊಡೆಯುತ್ತಿದೆ..
ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಫ್ಲಾಟ್ ಇದಾಗಿದೆ ಎನ್ನಲಾಗ್ತಿದೆ..
2016ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.
Surya – Jyothi : Surya Jyothi bought an expensive house worth 70 crores..!!