Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!
ಅಂಬರೀಷ್ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅವರ ಬಹುನಿರೀಕ್ಷೆಯ ಸಿನಿಮಾ ‘ ಬ್ಯಾಡ್ ಮ್ಯಾನರ್ಸ್’ ಸಾಕಷ್ಟು ವಿಚಾರಗಳಿಂದ ಸೌಂಡ್ ಮಾಡ್ತಿದೆ..
ದುನಿಯಾ ಸೂರಿ- ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದೆ..
ಈಗ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.. ನೌಟಂಕಿ ಬೇಡ ಹುಚ್ಚೆದ್ದ ಗೋಡ ಅಂತ ಶುರುವಾಗುವ ಟೈಟಲ್ ಸಾಂಗ್ ಜನರಿಗೆ ಸಖತ್ ಇಷ್ಟವಾಗ್ತಿದೆ..
ಚರಣ್ ರಾಜ್ ಟ್ಯೂನ್ ಹಾಕಿರೋ ಪೆಪ್ಪಿ ಸಾಂಗ್ , ಧನಂಜಯ್ ರಾಜನ್ ಲಿರಿಕ್ಸ್ ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್ ಕಾಂಬಿನೇಷನ್ ಅದ್ಭುತವಾಗಿದೆ..
ಚಿತ್ರದಲ್ಲಿ ಅಭಿಷೇಕ್ ಪೊಲೀಸ್ ಆಫೀಸರ್ ರುದ್ರನಾಗಿ ಕಾಣಿಸಿಕೊಂಡಿದ್ದಾರೆ.
Bad Manners Title Song : Abhishek ‘Bad Manners’ song release