Katera : ‘ಕಾಟೇರಾ’ ದಲ್ಲಿ ಕತ್ತಿ ಹಿಡಿದು ಖಡಕ್ ಆಗಿ ಬಂದ ಮಾಲಾಶ್ರೀ ಮಗಳು..!!!
ಡಿ ಬಾಸ್ ನಟನೆಯ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.. ಪವರ್ ಫುಲ್ ಮೋಷನ್ ಪೋಸ್ಟರ್ ದಾಸನ ಅಭಿಮಾನಿಗಳ ದಢ್ ಕನ್ ಹೆಚ್ಚಿಸಿತ್ತು.. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ..
ಇನ್ನೂ ಸಿನಿಮಾದಲ್ಲಿ ದರ್ಶನ್ ಗೆ ಚಂದನವನದ ಕನಸಿನ ರಾಣಿ ಮಾಲಾಶ್ರೀ ಮಗಳು ಡಿ ಬಾಸ್ ಗೆ ನಾಯಕಿಯಾಗಿ ಮಿಂಚಲಿದ್ದಾರೆ..
ಇದು ರಾಧನಾ ರಾಮ್ ಮೊದಲ ಸಿನಿಮಾವಾಗಿದ್ದು , ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆಗೆ ನಟಿಸುವ ಅದೃಷ್ಟ ಒಲಿದಿದೆ..
ಯುಗಾದಿ ಹಬ್ಬದ ಪ್ರಯುಕ್ತ ಕಟೇರ ಸಿನಿಮಾದಲ್ಲಿನ ರಾಧನಾ ರಾಮ್ ಲುಕ್ ರಿವೀಲ್ ಆಗಿದೆ..
ಸಖತ್ ಖಡಕ್ ಆಗಿ ರಾಧನಾ ಕಾಣಿಸಿಕೊಂಡಿದ್ದಾರೆ.
ಲಂಗಾದಾವಣಿ ಧರಿಸಿ , ಎರೆಡು ಜಡೆ ಕಟ್ಟಿ ಒಂದು ಕೈನಲ್ಲಿ ಪುಸ್ತಕ ಮತ್ತೊಂದು ಕೈನಲ್ಲಿ ಕತ್ತಿ ಹಿಡಿದು ಗಂಭೀರವಾಗಿ ನಿಂತಿದ್ದಾರೆ. ಅವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
ಅಂದ್ಹಾಗೆ ಸಿನಿಮಾದಲ್ಲಿ ರಾಧನಾ ಪ್ರಭಾವತಿ ಆಗಿ ಮಿಂಚಲಿದ್ದು , ದಾಸನ ಫ್ಯಾನ್ಸ್ ರಾಧನಾಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
Katera : In ‘Katera’, Malashree’s daughter killer look