Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ರಿಲೀಸ್ ಆದ ಮಲಯಾಳಂ ನ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗಿದೆ..
ವಿಷ್ಣು ಶಶಿ ಶಂಕರ್ ನಿರ್ದೇಶನವಿರುವ ಹಾಗೂ ಉನ್ನಿ ಮುಕುಂದನ್ ಲೀಡ್ ರೋಲ್ನಲ್ಲಿ ನಟಿಸಿರುವ ಮಾಳಿಕಪುರಂ ಚಿತ್ರ ಕಳೆದ ವರ್ಷ 30ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ಈ ಚಿತ್ರ ಡಿಸ್ನೆ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ನಲ್ಲಿ ಈ ಚಿತ್ರ ಓಟಿಟಿ ಬಿಡುಗಡೆಯಾಗಿದ್ದು, ಈಗ ಈ ಚಿತ್ರದ ಕನ್ನಡ ವರ್ಷನ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಕರ್ನಾಟಕದ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಾಳಿಕಪುರಂ ಕನ್ನಡ ವರ್ಷನ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ. ಬೆಂಗಳೂರು, ಮೈಸೂರು, ತುಮಕೂರು, ಕಲಬುರಗಿ, ದಾವಣಗೆರೆ, ಬಳ್ಳಾರಿ, ಮಂಗಳೂರು ಹಾಗೂ ಮಭಿಪಾಲ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಮಾಳಿಕಪುರಂ ಕನ್ನಡ ವರ್ಷನ್ ಬಿಡುಗಡೆಯಾಗಲಿದೆ. ಇನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಓಟಟಿಗೆ ಬಂದ ನಂರವೂ ಯಾವ ಚಿತ್ರವೂ ಸಹ ಇತರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿರಲಿಲ್ಲ.
ಈ ಚಿತ್ರ ಓಟಿಟಿಗೆ ಬಂದ ನಂತರ ಬೇರೆ ಭಾಷೆಗೆ ಡಬ್ ಆಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗ್ತಿದೆ.
Mollywood : Malayalam movie being released in theaters dubbed in Kannada after OTT release.