ಸ್ಟೈಲಿಶ್ ಕಿಂಗ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಸೂಪರ್ ಹಿಟ್ ಆಗಿ, ಹಲವು ದಾಖಲೆಗಳನ್ನು ಬರೆದಿತ್ತು. ಈ ಸಿನಿಮಾ ಸಕ್ಸಸ್ ಬಳಿಕ ಸುಕುಮಾರ್ ಪುಷ್ಪ ಸೀಕ್ವೆಲ್ ಮಾಡುತ್ತಿದ್ದಾರೆ. ಶೀಘ್ರವೇ ಸಿನಿಮಾ ತೆರೆ ಮೇಲೆ ಬರಲಿದೆ.
ಪುಷ್ಪ 2 ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿನಿಮಾ ಚಿತ್ರೀಕರಣ ನಡೆಯುತ್ತಿರುವಾಗಲೇ ಈ ಚಿತ್ರದ ಕುರಿತು ಜನರಲ್ಲಿ ಆಸಕ್ತಿ ಕೆರಳಿಸಲು ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಹೊಸ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಪುಷ್ಪ 2 ಸಿನಿಮಾ ಫಸ್ಟ್ ಲುಕ್ ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ, ಕೈಗೆ ಬಳೆ ಧರಿಸಿ, ಕೊರಳಲ್ಲಿ ಬಂಗಾರದ ಜತೆಗೆ ಕೈಯಲ್ಲಿ ಗನ್ ಹಿಡಿದು ಪುಷ್ಪ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿ ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ಗೆಟಪ್ ನೀಡಿರುವ ಹಿಂದಿನ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ತಿರುಪತಿಯಲ್ಲಿ ಪ್ರತಿ ವರ್ಷ ಗಂಗಮ್ಮ ಅಮ್ಮನವರ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸುವ ಸಂಪ್ರದಾಯ ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ.
ಪುಷ್ಪ 2 ನಲ್ಲಿ ಸುಕುಮಾರ್ ಅದೇ ರೀತಿ ತೋರಿಸಲಿದ್ದಾರೆ ಎನ್ನಲಾಗುತ್ತಿದೆ. ತಿರುಪತಿಯ ಸುತ್ತಮುತ್ತಲಿನ ಪ್ರದೇಶಗಳು ಪಾಳೇಗೊಂಡರ ಆಳ್ವಿಕೆಯಲ್ಲಿತ್ತು. ಹಾಗಾಗಿಯೇ ಪಾಳೇಗಾಲ ವಂಶಸ್ಥರು ಅಲ್ಲಿನ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿ ಹಿಂಸಿಸುತ್ತಿದ್ದರು. ದುಷ್ಕರ್ಮಿಗಳನ್ನು ಮಟ್ಟ ಹಾಕಲು ಮತ್ತು ಸ್ತ್ರೀ ಜನಾಂಗವನ್ನು ಉಳಿಸಲು ದೇವಿ ಕೈಕಾಲ ಜಾತಿಯಲ್ಲಿ ಗಂಗಮ್ಮನಾಗಿ ಜನಿಸಿದಳು. ಗ್ರಾಮ ದೇವತೆ ಗಂಗಮ್ಮನ ತಾಯಿ ಅಲ್ಲಿನ ಜನರನ್ನು ರಕ್ಷಿಸಲು ಮುಂದಾದರು. ತಾಯಿ ಸುಂದರ ಹುಡುಗಿಯಾಗಿ ಬೆಳೆದ ಬಳಿಕ ಆಕೆ ಗಂಗಮ್ಮನ ತಾಯಿ ಎಂದು ತಿಳಿಯದೆ ಆಕೆಗೆ ತೊಂದರೆ ಕೊಡಲು ಯತ್ನಿಸಿದರು. ಸಂದರ್ಭದಲ್ಲಿ ಗಂಗಮ್ಮ ತನ್ನ ವಿಶ್ವರೂಪವನ್ನು ಪ್ರದರ್ಶಿಸಿದ್ದಾರೆ ಎನ್ನುವ ಇತಿಹಾಸವಿದೆ. ಗಂಗಮ್ಮ ಹಲವು ವೇಷ ಧರಿಸಿ ಮೂರು ದಿನ ಅಲೆದಾಡಿದ್ದಾಳೆ. ನಾಲ್ಕನೇ ದಿನ ಗಂಗಮ್ಮ ಆತನ ತಲೆಯನ್ನು ಕಡಿದು ಕೊಂದಿದ್ದಾಳೆ ಎಬ ಪುರಾಣ ಕಥೆಯಿದೆ. ಅದನ್ನೇ ತಿಳಿಸುವ ಕಾರ್ಯ ಕೂಡ ನಡೆಯುತ್ತಿರಬಹುದು ಎಂಬ ಅಪ್ಡೇಟ್ ಸಿಕ್ಕಿದೆ.