ಅಭಿಮಾನಿಗೆ ಧಮ್ಕಿ ಹಾಕಿದ ನಟಿ ನಯನತಾರಾ
ಕುಂಬಕೋಣದಲ್ಲಿನ ದೇವಾಲಯಕ್ಕೆ ತೆರಳಿದಾಗ ನಡೆದ ಘಟನೆ
ನಯನತಾರಾ ಕಾಣುತ್ತಿದ್ದಂತೆ ಮುಗಿ ಬಿದ್ದಿದ್ದ ಅಭಿಮಾನಿಗಳು
ನಯನತಾರಾ ಹಾಗೂ ಪತಿಯ ವಿಡಿಯೋ ಮಾಡುತ್ತಿದ್ದಾಗ ಕೋಪಗೊಂಡ ನಟಿ
ಅಭಿಮಾನಿಯ ಫೋನ್ ಒಡೆದು ಹಾಕುತ್ತೇನೆಂದು ಬೈದ ನಟಿ
ನಟಿ ನಯನತಾರಾ(Nayanathara) ಹಾಗೂ ವಿಘ್ನೇಶ್ ಶಿವನ್ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾರೆ. ಅಲ್ಲದೇ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಕೂಡ ಪಡೆದಿದ್ದಾರೆ. ಇತ್ತೀಚೆಗೆ ಈ ದಂಪತಿ ಕುಂಬಕೋಣದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದರು.
ಈ ಸಂದರ್ಭದಲ್ಲಿ ನೆಚ್ಚಿನ ಕಲಾವಿದರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಮುಗಿಬಿದ್ದಿದ್ದರು. ಜನರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಕೆಲವರು ಸೆಲೆಬ್ರಿಟಿ ದಂಪತಿಯ ವಿಡಿಯೋ ಮಾಡುತ್ತಿದ್ದರು. ಇದರಿಂದ ನಯನತಾರಾ ಕೋಪ ನೆತ್ತಿಗೇರಿದೆ. ಅವರು ಅಭಿಮಾನಿಯ ಮೊಬೈಲ್ ಒಡೆದುಹಾಕುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಸೆಲೆಬ್ರಿಟಿಗಳ ಖಾಸಗಿತನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.