ಚಿನ್ನಾರಿ ಮುತ್ತ ಚಿತ್ರಕ್ಕೆ ಇಂದಿಗೆ 30 ವರ್ಷ!
ಹತ್ತು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಚಿತ್ರ
1993ರಲ್ಲಿ ತೆರೆಯ ಮೇಲೆ ಅಪ್ಪಳಿಸಿದ್ದ ಚಿತ್ರ
ಚಿನ್ನಾರಿ ಮುತ್ತ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ
ನಟ ವಿಜಯ್ ರಾಘವೇಂದ್ರ ಅಭಿನಯದ ಚಿನ್ನಾರಿ ಮುತ್ತ ಚಿತ್ರ ಬಿಡುಗಡೆಯಾಗಿ ಇಂದಿಗೆ 30 ವರ್ಷಗಳು ಆಗಿವೆ. ಟಿ.ಎಸ್. ನಾರಾಗಾಭರಣ ಅವರ ನಿರ್ದೇಶನದ ಈ ಚಿತ್ರದ ಮೂಲಕ ಬಾಲ ನಟರಾಗಿ ವಿಜಯ್ ರಾಘವೇಂದ್ರ ಎಲ್ಲ ಮಕ್ಕಳ ಫೇವರಿಟ್ ನಟ ಆಗಿದ್ದರು.
ಚಿನ್ನಾರಿ ಮುತ್ತ ಚಿತ್ರವು ಮಕ್ಕಳ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಸ್ಪೂರ್ತಿದಾಯಕ ಕಥೆ ಕೂಡ ಇತ್ತು. ಮಕ್ಕಳು ಇಷ್ಟ ಪಡುವ ಕಥೆ ಇದಾಗಿದ್ದರ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು.
ಚಿನ್ನಾರಿ ಮುತ್ತ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಸಿಕ್ಕಿದೆ. ಅತ್ಯುತ್ತಮ ಫೀಚರ್ ಫಿಲ್ಮಂ ಕ್ಯಾಟಗರಿಯಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಚಿನ್ನಾರಿ ಮುತ್ತ ಸಿನಿಮಾಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿವೆ. ಅತ್ಯುತ್ತಮ ಮಕ್ಕಳ ಸಿನಿಮಾ, ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಸಂಗೀತ ಮತ್ತು ಅತ್ಯುತ್ತಮ ಗಾಯನ ಕ್ಯಾಟೆಗರಿಯಲ್ಲಿ ಈ ಚಿತ್ರಕ್ಕೆ ಪ್ರಶಸ್ತಿಗಳು ಬಂದಿವೆ.
ಚಿನ್ನಾರಿ ಮುತ್ತ ಸಿನಿಮಾ ಬಂದು ಸದ್ಯ 30 ವರ್ಷಗಳು ಕಳೆದಿವೆ.1993 ರಲ್ಲಿ ಚಿನ್ನಾರಿ ಮುತ್ತ ಬಿಡುಗಡೆಯಾಗಿತ್ತು. ಆ ಲೆಕ್ಕದಲ್ಲಿ ಈಗ ಈ ಸಿನಿಮಾ 30 ವರ್ಷ ಪೂರ್ಣಗೊಳಿಸಿದೆ. ಚಿನ್ನಾರಿ ಮುತ್ತ 30 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಭಾಗವಹಿಸುತ್ತಿರುವ ಗಿಚ್ಚಿ ಗಿಲಿಗಿಲಿ-2 ಸೆಟ್ ನಲ್ಲಿ ಸಂಭ್ರಮಾಚರಣೆ ಆಚರಿಸಲಾಯಿತು. ನಟಿ ಶೃತಿ, ನಟ ಸಾಧು ಕೋಕಿಲ ಹಾಗೂ ವಿಜಯ್ ರಾಘವೇಂದ್ರ ಇದ್ದರು.