ಕೆಜಿಎಫ್ ಚಿತ್ರಕ್ಕೆ ಮೂರು ವರ್ಷ – ಸ್ಪೆಷಲ್ ವೀಡಿಯೋ ಬಿಡುಗಡೆ
ಇಡೀ ಭಾರತ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದ ಕನ್ನಡ ಚಿತ್ರರಂಗದ ಹೆಮ್ಮೆಯ ಚಲನಚಿತ್ರ ಕೆ ಜಿ ಎಫ್,
ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ರಿಲೀಸ್ ಆಗಿ ಇವತ್ತಿಗೆ ಮೂರು ವರ್ಷ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿದ್ದ ಚಿತ್ರ ಡಿಸೆಂಬರ್ 21 ರಂದು 2018ರಲ್ಲಿ ಬಿಡುಗಡೆಯಾಗಿ ಇಡೀ ಭಾರತದಾದ್ಯಂತ ಧೂಳೆಬ್ಬಿತ್ತು.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಿ ಎಲ್ಲಾ ಭಾಷೆಗಳಲ್ಲೂ ಮೆಚ್ಚುಗೆ ಗಳಿಸಿತ್ತು.
ಕಿಜಿಎಫ್ ಚಿತ್ರ ರಿಲೀಸ್ ಆಗಿ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಹೊಂಬಾಳೆ ಫೀಲಂಸ್ ಸ್ಪೆಷಲ್ ವೀಡಿಯೋವೊಂದನ್ನ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದೆ.
ಕೆಜಿಎಫ್ 2 ಕೂಡ ಬಿಡುಗಡೆಗೆ ಸಿದ್ಧಗೊಂಡಿದ್ದು ಏಪ್ರಿಲ್ 14 2022 ರಂದು ತೆರೆಗೆ ಬರಲಿದೆ. ಸಂಜಯ್ ದತ್ ಯಶ್ ಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದು ಇವರಿಬ್ಬರನ್ನ ತೆರೆಯ ಮೇಲೆ ಎದುರಾಗುವುದನ್ನ ನೋಡಲು ಚಿತ್ರ ರಸಿಕರು ಕಾಯುತ್ತಿದ್ದಾರೆ.
ಕೆಜಿಎಫ್ ನಂತರ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ರಶಾಂತ್ ನೀಲ್ ವೃತ್ತಿ ಜೀವನಕ್ಕೆ ಕೆ ಜಿ ಎಫ್ ದೊಡ್ಡ ಮೈಲಿಗಲ್ಲಾಗಿದ್ದು ಹಲವು ಸ್ಟಾರ್ ಹೀರೋಗಳನ್ನ ನಿರ್ದೇಶಿಸುವ ಅವಕಾಶ ಪಡೆಯುತ್ತಿದ್ದಾರೆ. ಈಗಾಗಲೆ ಪ್ರಭಾಸ್ ಜೊತೆ ಸಲಾರ್ ಚಿತ್ರವನ್ನ ಡೈರಕ್ಷನ್ ಸಹ ಮಾಡುತ್ತಿದ್ದಾರೆ.