ರಾಜಮೌಳಿ ಹತ್ರ ಡೇಂಜರಸ್ ಪುರುಷರಿದ್ದಾರೆ.. ನನ್ನ ಬಳಿ ಡೇಂಜರಸ್ ಹುಡುಗಿಯರಿದ್ದಾರೆ : RGV
ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದು ಟ್ವೀಟ್ ಮಾಡಿದ್ದು ಹಲ್ ಚಲ್ ಸೃಷ್ಟಿ ಮಾಡಿದೆ.
ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ.
ಆರ್ ಜಿ ವಿ ‘ಖತ್ರಾ ಡೇಂಜರಸ್’ ಎನ್ನುವ ಸೆನ್ಷೇಷನಲ್ ಸಿನಿಮಾ ಮಾಡಿದ್ದು , ಈ ಸಿನಿಮಾ ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಮೊದಲ ಲೆಸ್ಬಿಯನ್ ಸಿನಿಮಾವಾಗಿದೆ.. ಈ ಸಿನಿಮಾದಲ್ಲಿ ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ನಟಿಸಿದ್ದಾರೆ. ಈ ಹುಡುಗಿಯರನ್ನ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದೆ.
ರಾಮ್ ಗೋಪಾಲ್ ವರ್ಮಾ ಅವರು ಈ ಟ್ವೀಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದರು.