KGF 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ ಮಾಡಿದ ಟೀಮ್
KGF 2 ಬಾಕ್ಸ್ ಆಫೀಸ್ ನಲ್ಲಿ ತೂಫಾನಿ ಓಟ ಮುಂದುವರೆಸಿದೆ.. 2 ನೇ ವಾರದಂತ್ಯಕ್ಕೆ ಸಿನಿಮಾ 880 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ..
ಕೆಜಿಎಫ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಯಶ್ ಅವರ ಚಿತ್ರ ರಜನಿಕಾಂತ್ ಅವರ 2.0 ಅನ್ನು ಹಿಂದಿಕ್ಕಿ 7 ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹಜೊರಹೊಮ್ಮಿದೆ..
ಕೆಜಿಎಫ್ ಅಧ್ಯಾಯ 2 ಬಾಕ್ಸ್ ಆಫೀಸ್ ಕಲೆಕ್ಷನ್: ಹತ್ತು ದಿನಗಳಲ್ಲಿ ರೂ 800 ಕೋಟಿ ದಾಟಿದೆ. ಇದು ಈಗ ಸಾರ್ವಕಾಲಿಕ 7 ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ನಟನೆಯ, ಕೆಜಿಎಫ್ 2 ಬಾಕ್ಸ್ ಆಫೀಸ್ನಲ್ಲಿ ತನ್ನ ಕನಸಿನ ಓಟವನ್ನು ಮುಂದುವರೆಸಿದೆ.
818.73 ಕೋಟಿ ಕಲೆಕ್ಷನ್ಗಳೊಂದಿಗೆ ಏಳನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.
ಸಿನಿಮಾದ ಸಕ್ಸಸ್ ನ ಖುಷಿಯಲ್ಲಿರುವ ಸಿನಿಮಾತಂಡ ಗೋವಾದಲ್ಲಿ ಪಾರ್ಟಿ ಮಾಡ್ತಿದೆ.. ಹೌದು ಯಶ್ , ವಿಜಯ್ ಕಿರಗಂದೂರು , ಪ್ರಶಾಂತ್ ನೀಲ್ ಮತ್ತಿಡೀ ಟೀಮ್ ಗೋವಾದಲ್ಲಿ KGF 2 ಸಕ್ಸಸ್ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.. ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದ್ದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ..
ಗೋವಾದಲ್ಲಿ ನಡೆದ ಸಕ್ಸಸ್ ಪಾರ್ಟಿಯಲ್ಲಿ ಬಹುತೇಕ ಕೆಜಿಎಫ್ 2 ತಂಡ ಭಾಗಿಯಾಗಿದೆ. ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪತ್ನಿ, ನಿರ್ಮಾಪಕ ವಿಜಯ ಕಿರಗಂದೂರು ಮತ್ತು ಪತ್ನಿ, ಸಿನಿಮಾಟೋಗ್ರಾಫರ್ ಭುವನ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ನಿರ್ದೇಶಕ ಸೂರಿ, ಕಾಸ್ಟ್ಯೂಮ್ ಡಿಸೈನರ್ ಹೀಗೆ ಬಹುತೇಕರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.