Sandalwood : 2017 ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ
ಸುಮಾರು 5 ವರ್ಷಗಳ ನಂತರ ಕರ್ನಾಟಕ ರಾಜ್ಯ ಸರ್ಕಾರವು 2017 ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದೆ..
ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪದಾನ ಮಾಡಿದ್ದಾರೆ..
ಪ್ರತಿ ವರ್ಷವೂ ಆ ವರ್ಷದ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗ್ತಿತ್ತು.. ಆದ್ರೆ ಸುಮಾರು 5 ವರ್ಷಗಳಿಂದ ಈ ಪ್ರಕ್ರಿಯೆ ನಿಂತಿತ್ತು.. 2017ರಿಂದ ಈವರೆಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ಕೊರೊನಾ , ರಾಜಕೀಯ ಬೆಳವಣಿಗೆಗಳು ಸೇರಿ ನಾನಾ ಕಾರಣಗಳಿವೆ.. 2017ರಲ್ಲಿ ಎರಡು ಬಾರಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರೂ, ನಾನಾ ಕಾರಣಗಳಿಂದಾಗಿ ನಿಗದಿತ ದಿನಾಂಕಗಳಂದು ನಡೆಯಲಿಲ್ಲ.
2018 ನವೆಂಬರ್ 24 ರಂದು ಬೆಂಗಳೂರಿನಲ್ಲಿ 2017ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಆದ್ರೆ ಮಂಡ್ಯದ ಬಳಿ ಬಸ್ಸೊಂದು ಕೆರೆಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡರು. ಜತೆಗೆ ಅಂದೇ ಅಂಬರೀಶ್ ಕೂಡ ನಿಧನರಾದರು. ಹಾಗಾಗಿ ಪ್ರದಾನ ಸಮಾರಂಭ ನಡೆಯಲಿಲ್ಲ..
ಇದೀಗ ಕೊನೆಗೂ 5 ವರ್ಷಗಳ ನಂತ್ರ ಕಾಲ ಕೂಡಿ ಬಂದಿತ್ತು.. ಪ್ರಶಸ್ತಿ ಪ್ರದಾನ ಸಮಾರಂಭವೂ ನೆರವೇರಿತು,.,
ಏಪ್ರಿಲ್ 24 ಡಾ.ರಾಜ್ಕುಮಾರ್ ಜನ್ಮದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಅಂದ್ಹಾಗೆ 2017 ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ..
ವಿಷ್ಣುವರ್ಧನ್ ಪ್ರಶಸ್ತಿ – ಜಿ ಎನ್ ಲಕ್ಷ್ಮಿಪತಿ (ನಿರ್ಮಾಪಕ)
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಎಸ್.ನಾರಾಯಣ್ ( ನಟ , ನಿರ್ದೇಶಕ , ನಿರ್ಮಾಪಕ)
ಡಾ.ರಾಜ್ಕುಮಾರ್ ಪ್ರಶಸ್ತಿ – ಲಕ್ಷ್ಮಿ ( ಹಿರಿಯ ನಟಿ)
ಅತ್ಯುತ್ತಮ ಛಾಯಾಗ್ರಹಣ – ಸಂತೋಷ್ ರೈ ಪಾತಾಜೆ (DOP)
ಅತ್ಯುತ್ತಮ ನಟಿ – ತಾರಾ ಅನುರಾಧ (ಹೆಬ್ಬೆಟ್ ರಾಮಕ್ಕ ಸಿನಿಮಾಗೆ ಪ್ರಶಸ್ತಿ)
ಅತ್ಯುತ್ತಮ ನಟ – ವಿಶ್ರುತ್ ನಾಯ್ಕ( ಮಂಜರಿ ಸಿನಿಮಾ)
ಪ್ರಥಮ ಅತ್ಯುತ್ತಮ ಚಿತ್ರ- ಶುದ್ಧಿ
ದ್ವಿತೀಯ ಅತ್ಯುತ್ತಮ ಚಿತ್ರ- ಮಾರ್ಚ್ 22
ತೃತೀಯ ಅತ್ಯುತ್ತಮ ಚಿತ್ರ- ಪಡ್ಡಾಯಿ
ವಿಶೇಷ ಸಾಮಾಜಿಕ ಕಳಕಳಿ ಚಿತ್ರ- ಹೆಬ್ಬೆಟ್ ರಾಮಕ್ಕ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ರಾಜಕುಮಾರ
ಅತ್ಯುತ್ತಮ ಪೋಷಕ ನಟಿ- ರೇಖಾ
ಅತ್ಯುತ್ತಮ ಕಥೆ- ಹನುಮಂತ ಬಿ ಹಾಲಿಗೇರಿ ಹಾಗೂ ನುಗಡೋಣಿ
ಅತ್ಯುತ್ತಮ ಚಿತ್ರಕಥೆ- ವೆಂಕಟ್ ಭಾರದ್ವಾಜ್
ಅತ್ಯುತ್ತಮ ಸಂಭಾಷಣೆ- ಜಿ ಎಸ್ ಸಿದ್ಧರಾಮಯ್ಯ
ಅತ್ಯುತ್ತಮ ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ಸೋಫಿಯಾ
ಅತ್ಯುತ್ತಮ ಪೋಷಕ ನಟ-ಮಂಜುನಾಥ ಹೆಗಡೆ
ಅತ್ಯುತ್ತಮ ಕಲಾ ನಿರ್ದೇಶಕ -ರವಿ ಎಸ್ ಎ
ಅತ್ಯುತ್ತಮ ಸಂಗೀತ ನಿರ್ದೇಶಕ- ವಿ.ಹರಿಕೃಷ್ಣ
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ
ಅತ್ಯುತ್ತಮ ಬಾಲ ನಟ- ಮಾಸ್ಟರ್ ಕಾರ್ತಿಕ್
ಅತ್ಯುತ್ತಮ ಬಾಲ ನಟಿ- ಶಾಘ್ಲ ಸಾಲಿಗ್ರಾಮ ಮಿತ್ರ (ಚಿತ್ರ – ರಾಗ)
ಸುರೇಶ್ ಕೆ ( ಅತ್ಯುತ್ತಮ ನಿರ್ಮಾಣ ನಿರ್ವಾಹಕ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅಪೂರ್ವ ಶ್ರೀಧರ್
ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರೀದರ್ಶನ್
ಚಲನಚಿತ್ರ ಸಾಹಿತ್ಯ ಪ್ರಶಸ್ತಿ- ಗಂಗಾಧರ್ ಮೊದಲಿಯಾರ್
ಅತ್ಯುತ್ತಮ ಗೀತರಚನೆ- ಜೆ.ಎಂ ಪ್ರಹ್ಲಾದ್
ಅತ್ಯುತ್ತಮ ಹಿನ್ನೆಲೆ ಗಾಯಕ- ತೇಜಸ್ವಿ ಹರಿದಾಸ್
‘March 22’ , ಇತರ ಎರಡು ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ