ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ.. ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ..
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಆದ್ರೆ ಈ ವರ್ಷ ಒಂದಲ್ಲ ಬದಲಾಗಿ ಹಿಂದಿಯ ಮಾದರಿಯಲ್ಲೇ ಎರೆಡೆರೆಡು ಬಿಗ್ ಬಾಸ್ ಶೋ ಪಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡ್ತಿದೆ..
ಹೌದು…! ಬಿಗ್ ಬಾಸ್ ಜೊತೆಗೆ ಮಿನಿ ಬಿಗ್ ಬಾಸ್ ಪ್ರಸಾರವಾಗಲಿದೆ.. ಅಂದ್ರೆ ಒಂದು ನೇರ ಒಟಿಟಿಯಲ್ಲಿ ಪ್ರಸಾರವಾದ್ರೆ ಮತ್ತೊಂದು ಟಿವಿಯಲ್ಲಿ.
ಓಟಿಟಿಗಾಗಿ ಒಂದು ಬಿಗ್ ಬಾಸ್ ನಡೆದರೆ ಮತ್ತೊಂದು ಟಿಯಲ್ಲಿ ಇರಲಿದೆ… ಮಿನಿ ಬಿಗ್ ಬಾಸ್ ನಲ್ಲಿ ಪಾಲ್ಗೊಂಡು ಇಬ್ಬರಿಗೆ ರೆಗ್ಯುಲರ್ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಂದ್ರೆ ಹಿಂದಿಯ ಮಾದರಿಯನ್ನೇ ಫಾಲೋ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡ್ತಿದೆ.. ವಿಶೇಷ ಅಂದ್ರೆ ಎರಡೂ ಶೋಗಳಿಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.
ಹಿಂದಿಯಲ್ಲಿ ಒಟಿಟಿಯಲ್ಲಿ ಕರಣ್ ಜೋಹರ್ ನಿರೂಪಣೆ ಮಾಡಿದ್ದರು.. ಈಗಾಗಲೇ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲು ಸ್ಪರ್ಧಿಗಳ ಹುಡುಕಾಟ ಆರಂಭವಾಗಿದೆ ಎಂದೂ ಕೂಡ ಹೇಳಲಾಗ್ತಿದೆ..