ಅಭಿಮಾನಿಗಳ ಅಭಿಮಾನದ ಪವರ್ ಏನನ್ನ ಬೇಕಾದ್ರೂ ಸಾಧಿಸಬಲ್ಲದು ಅನ್ನೋದಕ್ಕೆ ಪವರ್ ಸ್ಟಾರ್ #PuneethRajkumar ಅವರ #Twitter ಖಾತೆಯಿಂದ ತೆಗೆದುಹಾಕಲಾಗಿದ್ದ ಬ್ಲೂ ಟಿಕ್ ವಾಪಸ್ ಸಿಕ್ಕಿರುವುದುದೇ ಸಾಕ್ಷಿ..
ಹೌದು..! ಅಪ್ಪು ನಮ್ಮನ್ನೆಲ್ಲಾ ಅಗಲಿ ಸುಮಾರು 9 ತಿಂಗಳುಗಳೇ ಕಳೆದ್ರೂ ಜನರ ಮನಸ್ಸಲ್ಲಿ ಜೀವಂತವಾಗಿದ್ದಾರೆ… ಅಭಿಮಾನಿಗಳು ಸಮಾಜಮುಖಿ ಕಾರ್ಯಗಳಲ್ಲಿ ಜೀವಂತವಾಗಿದ್ದಾಗಿ.. ಆದ್ರೆ ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಅವರ ಟ್ವಿಟ್ಟರ್ ಖಾತೆಗೆ ನೀಡಲಾಗಿದ್ದ ಅಧಿಕೃತ ಬ್ಲೂ ಟಿಕ್ ತೆಗೆದುಹಾಕಲಾದಾಗ ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗಿತ್ತು.. ಟ್ವಿಟ್ಟರ್ ವಿರುದ್ಧ ಆಕ್ರೋಶಗೊಂಡಿದ್ದ ಅಭಿಮಾನಿಗಳು ಬ್ಲೂ ಟಿಕ್ ಗಾಗಿ ಅಭಿಯಾನವನ್ನೇ ಮಾಡಿದ್ದರು..
ಕೊನೆಗೂ ಪುನೀತ್ ರಾಜ್ ಕುಮಾರ್ ಅವರ ಟ್ವಿಟ್ಟರ್ ಖಾತೆಯಿಂದ ಮಾಯವಾಗಿದ್ದ ಬ್ಲೂ ಟಿಕ್ ವಾಪಸ್ ಸಿಕ್ಕಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ… ನಿರ್ದೇಶಕ ಸಂತೋಶ್ ಆನಂದ್ ರಾಮ್ ಅವರು ಟ್ವೀಟ್ ಮಾಡಿ , ಟ್ವಿಟ್ಟರ್ , ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ..
ಅಭಿಮಾನಿಗಳ ಭಾವನೆಗೆ ಗೌರವ ಕೊಟ್ಟು, ಪುನೀತ್ ಖಾತೆಗೆ ಬ್ಲೂ ಟಿಕ್ ಮರಳಿ ಕೊಡಲಾಗಿದೆ. ಅಂದ್ಹಾಗೆ ಫೇಮಸ್ ವ್ಯಕ್ತಿಗಳು , ಸೆಲೆಬ್ರಿಟಿಗಳು , ರಾಜಕಾರಣಿಗಳು , ಗಣ್ಯರು , ಸಂಸ್ಥೆಗಳಿಗೆ ಟ್ವಿಟರ್ ಬ್ಲೂ ಟಿಕ್ ನೀಡಲಾಗುತ್ತೆ…
ಈ ಮೂಲಕ ನಟ ನಟಿಯರ ಅಧಿಕೃತ ಖಾತೆಯಿದು ಎಂದು ಸೂಚಿಸುತ್ತದೆ. ಇದರಿಂದ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಸ್ಟಾರ್ಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನ ಹಂಚಿಕೊಳ್ಳಬಹುದು. ಮತ್ತೆ ಈ ರೀತಿ ಬ್ಲೂ ಟಿಕ್ ನೀಡುವುದರಿಂದ ಯಾರೂ ಕೂಡ ಅಂತಹವರ ಹೆಸರುಗಳಲ್ಲಿ ನಕಲಿ ಖಾತೆ ತೆರೆಯಲು ಸಾಧ್ಯವಿರುವುದಿಲ್ಲ..
ಆದ್ರೆ ದೀರ್ಘ ಕಾಲದವೆರೆಗೆ ಆ ಖಾತೆ ಆಕ್ಟೀವ್ ಇಲ್ಲದೇ ಇದ್ದರೆ ಬ್ಲೂ ಟಿಕ್ ಅನ್ನು ತೆಗೆದು ಹಾಕಲಾಗುತ್ತದೆ. ಹೀಗಾಗಿಯೇ ಪುನೀತ್ ರಾಜ್ ಕುಮಾರ್ ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು.,..