ಭಾರತದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾಗಳ ಪೈಕಿ ಒಂದು ಪೊನ್ನಿಯನ್ ಸೆಲ್ವನ್ (Ponniyin Selvan) .. ಮಲ್ಟಿ ಲಾಂಗ್ವೇಜ್ ಸಿನಿಮಾವಿದು.. ಎಲ್ಲಾ ಭಾಷೆಯ ಸೂಪರ್ ಸ್ಟಾರ್ ಗಳೇ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಎರೆಡು ಭಾಗಗಳಲ್ಲಿ ಸಿನಿಮಾ ಬರುತ್ತಿದೆ… ಚೋಳರ ಗತಕಾಲದ ವೈಭವವನ್ನ ತೋರಿಸಲು ಹೊರಟಿರೋದು ಸ್ಟಾರ್ ನಿರ್ದೇಶಕ ಮಣಿರತ್ನಂ.
ಸಿನಿಮಾದಲ್ಲಿ ಐಶ್ವರ್ಯ ರೈ , ಚಿಯಾನ್ ವಿಕ್ರಮ್ , ತ್ರಿಶಾ , ಕಾರ್ತಿ ಹೀಗೆ ಸೂಪರ್ ಸ್ಟಾರ್ ಗಳೇ ಬಣ್ಣ ಹೆಚ್ಚಿದ್ದು ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.. ಅಲ್ಲದೇ ಇತ್ತೀಚೆಗೆ ಸಿನಿಮಾದ ಟೀಸರ್ ಸಹ ರಿಲೀಸ್ ಆಗಿದ್ದು ಕ್ರೇಜ್ ದುಪ್ಪಟ್ಟಾಗಿಸಿದೆ..
ಆದ್ರೆ ಇಷ್ಟೆಲ್ಲಾ ನಿರೀಕ್ಷೆ ಹುಟ್ಟುಹಾಕಿರುವ PS – 1 ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದು ಸಂಕಷ್ಟಕ್ಕೆ ಸಿಲುಕಿದೆ.. ಸಿನಿಮಾಗೆ ನೋಟಿಸ್ ಜಾರಿಯಾಗಿದೆ.. ಅಂದ್ಹಾಗೆ ನಟ ವಿಕ್ರಮ್ ಹಾಗೂ ನಿರ್ದೇಶಕ ಮಣಿರತ್ನಂ ಅವರಿಗೆ ನ್ಯಾಯಾಲಯನೋಟಿಸ್ ಹೊರಡಿಸಿದೆ..
ಈ ಚಿತ್ರದಲ್ಲಿ ವಿಕ್ರಮ್ ಐತಿಹಾಸಿಕವಾಗಿ ತಮಿಳುನಾಡನ್ನು ಆಳಿದ್ದ ಚೋಳರ ಸಾಮ್ರಾಜ್ಯದ ಆದಿತ್ಯ ಕರಿಕಾಲನ್ ಎಂಬ ರಾಜನ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು , ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ…
ಈ ಚಿತ್ರದಲ್ಲಿ ಚೋಳರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸೆಲ್ವಂ ಎಂಬ ವಕೀಲರು ದೂರಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ವಕೀಲರ ದೂರಿನ ಪ್ರಕಾರ ಚೋಳರು ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಚಿತ್ರದಲ್ಲಿ ವಿಕ್ರಮ್ ಅವರು ಹಣೆಯ ಮೇಲೆ ತಿಲಕವಿಟ್ಟುಕೊಂಡಿರುವುದನ್ನು ತೋರಿಸಲಾಗಿದ್ದು , ಚೋಳರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ದೂರಿದ್ಧಾರೆ..
ಅಷ್ಟೇ ಅಲ್ದೇ ವಕೀಲರಾದ ಸೆಲ್ವಂ ಅವರು ಈ ಬಗ್ಗೆ ತಮಗೆ ಈ ಚಿತ್ರದ ವಿಶೇಷವಾದ ಪ್ರದರ್ಶನವನ್ನು ಏರ್ಪಡಿಸಬೇಕೆಂದು ಹೇಳಿದ್ದು ಆ ಮೂಲಕ ಅವರು ಈ ಚಿತ್ರದ ಮೊದಲ ಭಾಗದಲ್ಲಿ ಚೋಳರನ್ನು ಹೇಗೆ ತೋರಿಸಲಾಗಿದೆ, ಐತಿಹಾಸಿಕವಾಗಿ ಅವರನ್ನು ತಪ್ಪಾಗಿ ಪ್ರತಿಬಿಂಬಿಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ..
ಅಂದ್ಹಾಗೆ ಈ ಸಿನಿಮಾದ ಮೊದಲ ಭಾಗ ( PS – 1) ಸೆಪ್ಟೆಂಬರ್ 30ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತಮಿಳು , ಕನ್ನಡ , ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.