James Trademark song Review : ದಿಮಾಕು ಎಲ್ಲಾ ಬಿಟ್ಟಾಕು … ನೋಡು ಬಂದಾಯ್ತು ಪವರ್ ಫುಲ್ ಮಾಲೀಕು – ಸ್ಟೈಲಿಗೆ ಸ್ಮೈಲಿಗೆ ಅಪ್ಪು ಟ್ರೇಡ್ ಮಾರ್ಕ್….
ಇವ್ರ ಬಗ್ಗೆ ನಿಂಗೆ ಇಂಟ್ರಡಕ್ಷನ್ ಬೇಕಾ.. ಇವ್ರ ಬಗ್ಗೆ ನಿಂಗೆ ಇನ್ಫಾರ್ಮೇಷನ್ ಬೇಕಾ.. ಖಂಡಿತ ಬೇಡ… ಅಪ್ಪು ಅವರ ಹೆಸರು ಬರೀ ಪವರ್ ಅಲ್ಲ ಪುನೀತ್ ರಾಜ್ ಕುಮಾರ್ ಅನ್ನೋದು ಒಂದು ಟ್ರೇಡ್ ಮಾರ್ಕ್… ಜೇಮ್ಸ್ ಸಿನಿಮಾದ ಪವರ್ ಫುಲ್ ಹಾಡು ರಿಲೀಸ್ ಆಗಿದ್ದು , ಅಪ್ಪು ಅಭಿಮಾನಿಗಳ ಹಾರ್ಟ್ ಬೀಟ್ಸ್ ಹೆಚ್ಚಿಸಿದೆ.
ದಿಮಾಕು ಎಲ್ಲಾ ಬಿಟ್ಟಾಕು … ನೋಡು ಬಂದಾಯ್ತು ಪವರ್ ಫುಲ್ ಮಾಲೀಕು.. ಹೀಗೆ ಪವರ್ ಫುಲ್ ಆಗಿ ಸಾಂಗ್ ಶುರುವಾಗುತ್ತೆ.. ಅಪ್ಪು ಅಭಿಮಾನಿಗಳ ಉಸಿರು ಬಿಗಿ ಹಿಡಿಯುವಂತಿದೆ ಈ ಹಾಡು… ಹಾಡು ಕೇಳ್ತಿದ್ರೆ , ಅಪ್ಪು ಡ್ಯಾನ್ಸ್ , ಅಪ್ಪು ಆಟಿಟ್ಯೂಡ್ , ಅಪ್ಪು ಲುಕ್ಸ್ ನೋಡ್ತಿದ್ರೆ ಗೂಸ್ ಬಂಪ್ಸ್ ನ ಫೀಲ್ ಮಾಡಬಹುದು.. ಕಂಪೆರೆಲ್ಲಾ ಮಾಡಿಕೊಳ್ಬೇಡ ಬೇರೆ ಲೆವೆಲ್ ಕಣೋ , ಕಾಂಪಿಟೇಷನ್ ಅಂತೂ ಬೇಡ ಬೇರೆ ಲೆವೆಲ್ ಕಣೋ , ಗುಂಡಿಗೆ ಡಬಲ್ ಇದ್ರೂ ನಿನಗೆ ಟ್ರಬಲ್ ಕಣೋ , ಸ್ಮೈಲಿಗೂ , ಸ್ಟೈಲಿಗೂ ನೀನೇ ಟ್ರೇಡ್ ಮಾರ್ಕ್ ಅನ್ನೋ ಲಿರಿಕಲ್ ಲೈನ್ಸ್ ಒಂದು ಎಕ್ಸ್ ಟ್ರೀಮ್ ಫೀಲ್ ಕೊಡತ್ತೆ…
ಚೇತನ್ ಕುಮಾರ್ ಸಾಹಿತ್ಯ , ಚಂದನ್ ಶೆಟ್ಟಿ ವಾಯ್ಸ್ , ಚರಣ್ ರಾಜ್ ಸಂಯೋಜನೆ ಸೂಪರ್ ಇದೆ. ಹಾಡಿನ ಮಧ್ಯದಲ್ಲಿ ಬಂದು ಅಪ್ಪು ಆಟಿಟ್ಯೂಡ್ ನ ಖದರಾಗಿ ಹೊಗೊಳೋ ಶ್ರೀಲೀಲಾ , ಆಶಿಕಾ ರಂಗನಾಥ್ , ರಚಿತಾ ಕೂಡ ಗಮನ ಸೆಳೆದಿದ್ದಾರೆ.
ಮೇಕಿಂಗ್ ವಿಡಿಯೋದಲ್ಲಿ ಅಪ್ಪು ನೋಡಿದ್ರೆ ಅಭಿಮಾನಿಗಳು ಕೊಂಚ ಭಾವುಕಾರಾಗ್ತಾರೆ.. ಈ ಸಿನಿಮಾ ಮಾರ್ಚ್ 17 ಅಂದ್ರೆ ಅಪ್ಪು ಬರ್ತ್ ಡೇ ಗೆ ರಿಲೀಸ್ ಆಗ್ತಿದ್ದು , ಅಪ್ಪು ಅಭಿಮಾನಿಗಳಂತೂ ಈಗಿನಿಂದಲೇ ದಿನಗಣನೆ ಆರಂಭಿಸಿ , ಜೇಮ್ಸ್ ರಿಲೀಸ್ ಹಾಗೂ ಅಪ್ಪು ಬರ್ತ್ ಡೇಯನ್ನ ದೊಡ್ಡ ಜಾತ್ರೆಯಂತೆ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ..
ಜೇಮ್ಸ್ ಸಿನಿಮಾ ಅದ್ಧೂರಿಯಾಗೇ 5 ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.. 15 ದೇಶಗಳಲ್ಲಿ ರಿಲೀಸ್ ಆಗಲಿದೆ.. ಕೇವಕಲ ಕನ್ನಡ ಅಷ್ಟೇ ತಮಿಳಿನಲ್ಲೂ ಈಗಾಗಲೇ ಹಾಡು ರಿಲೀಸ್ ಆಗಿ ತಮಿಳು ಅಭಿಮಾನಿಗಳಿಂದಲೂ ಹಾಡಿಗೆ ಸೂಪರ್ ರೆಸ್ಪಾನ್ಸ್ ಸಿಗ್ತಿದೆ..