KGF 2 : ಮಾರ್ಚ್ 27 ಕ್ಕೆ ಬರುತ್ತಿದೆ ಕೆಜಿಎಫ್ ಟ್ರೇಲರ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಹೊಸ ಅಪ್ ಡೇಟ್ ಗಳಿಗಾಗಿ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ದಾರೆ.. ಇದೀಗ ಸಿನಿಮಾತಂಡ ಕೊನೆಗೂ ಅಭಿಮಾನಿಗಳ ಕಾತರತೆಗೆ ತೆರೆ ಎಳೆದಿದೆ. ಅಧಿಕೃತವಾಗಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಹೊಂಬಾಳೆ ಫಿಲಮ್ಸ್ , ನಿರ್ಮಾಪಕ ವಿಜಯ್ ಕಿರಗಂದೂರು , ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಧಿಕೃತ ಟ್ವಿಟ್ಟರ್ ನಿಂದ ಖಾತೆ ಮೂಲಕ ಈ ವಿಚಾರವನ್ನ ಹಂಚಿಕೊಳ್ಳಲಾಗಿದ್ದು , ಅಭಿಮಾನಿಗಳು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.
ಮಾರ್ಚ್ 26 6.40 ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ.. ಟೀಸರ್ ಮಾಡಿದ್ದ ಸೌಂಡ್ ಕಡಿಮೆ ಅಲ್ಲ.. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ರೆಕಾರ್ಡ್ ಮಾಡಿತ್ತು.. ಆದ್ರೀಗ ಬರುತ್ತಿರೋದು ಟ್ರೇಲರ್ ಸುನಾಮಿಯಂತೆಯೇ ಸೌಂಡ್ ಮಾಡಲಿದೆ. ಅಂದ್ಹಾಗೆ ಇತ್ತೀಚೆಗೆ ಕೆಜಿಎಫ್ ಸಿನಿಮಾ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಅಧಿಕೃತವಾಗಿ ಟ್ವೀಟ್ ಒಂದನ್ನ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.. ಟ್ವೀಟ್ ನಲ್ಲಿ ವೋಟಿಂಗ್ ಆಪ್ಷನ್ ನೀಡಿತ್ತು.. ನಿಮಗೆ ಸಿನಿಮಾದ ಯಾವ ಅಪ್ ಡೇಟ್ ಬೇಕು..?? ಹಾಡು,,??? ಟ್ರೇಲರ್ ಅಥವ ಸರ್ಪ್ರೈಸ್ ಅಪ್ ಡೇಟ್ ಬೇಕಾ ಎಮದು ಕೆಜಿಎಫ್ ಆರ್ಮಿಯನ್ನ ಕೇಳಿತ್ತು.. ಹೆಚ್ಚು ಜನರು ಟ್ರೇಲರ್ ಕೇಳಿ ವೋಟ್ ಮಾಡಿದ್ದರಿಂದ ಸಿನಿಮಾ ತಂಡವು ಟ್ರೇಲರ್ ರಿಲೀಸ್ ಮಾಡಲು ತಯಾರಿ ನಡೆಸಿಕೊಳ್ತಿದೆ.