ಮಿಲೇನಿಯಲ್ ಅವಾರ್ಡ್ಸ್ 2022 : ಸ್ಮೋಕಿ ಐಸ್ , ಸ್ಟನಿಂಗ್ ಲುಕ್ ನಲ್ಲಿ ಜಾನ್ವಿ ಪ್ರತ್ಯಕ್ಷ..!!
ಗ್ರಾಜಿಯಾ ಮಿಲೇನಿಯಲ್ ಅವಾರ್ಡ್ಸ್ 2022 ರಲ್ಲಿ ಜಾನ್ವಿ ಕಪೂರ್ ಸ್ಟನಿಂಗ್ ಲುಕ್ ನಲ್ಲಿ ದರ್ಶನ ನೀಡಿದ್ದಾರೆ.. ಮೋಸ್ಟ್ ಲವಿಂಗ್ ಅವಾರ್ಡ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ..
ಧಡಾಕ್ ಸಿನಿಮಾ ಮೂಲಕ ಬಾಲಿವುಡ್ ಗೆ ಪ್ರವೇಶಿಸಿರುವ ಶ್ರೀದೇವಿ ಪುತ್ರಿ ಜಾನ್ವಿ ಕೆಲವು ವರ್ಷಗಳಿಂದ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದ್ರೂ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿಲ್ಲ..
ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಾನ್ವಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಫ್ಯಾಷನ್ ಸೆನ್ಸ್ , ಜೊತೆಗೆ ನಡವಳಿಕೆಯಿಂದಲೇ ಅಭಿಮಾನಿಗಳ ಮನ ಗೆಲ್ಲುವ ಕಲೆ ಜಾನ್ವಿ ಅವರಿಗಿದೆ.. ಅವಾರ್ಡ್ ಈವೆಂಟ್ ನಲ್ಲಿ ರಾತ್ರಿ ರೆಡ್ ಕಾರ್ಪೆಟ್ ನಲ್ಲಿ ಅವರ ಗ್ಲಾಮ್-ಅಪ್ ಲುಕ್ ಇದಕ್ಕೆ ಸಾಕ್ಷಿ..
ಚಿತ್ರಗಳಲ್ಲಿ, ಜಾನ್ವಿ ಬೆರಗುಗೊಳಿಸುವ ಶೈನಿ ಗೋಲ್ಡನ್ ಮತ್ತು ಸಿಲ್ವರ್ ಬಾಡಿಕಾನ್ ಗೌನ್ ಧರಿಸಿದ್ದರು. ಗುಂಜನ್ ಸಕ್ಸೇನಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಜಾನ್ವಿಗೆ ಈ ಸಿನಿಮಾದಲ್ಲೂ ಅಷ್ಟರ ಮಟ್ಟಿಗೆ ಸಕ್ಸಸ್ ಸಿಕ್ಕಿಲ್ಲ..
ಸ್ಮೋಕಿ ಐಸ್ , ವಿತೌಟ್ ಆಕ್ಸಸರೀಸ್ ಕೂಡ ಜಾನ್ವಿ ಮಸ್ತ್ ಲುಕ್ ನಲ್ಲಿ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ.. ನ್ಯೂಡ್ ಮೇಕಪ್ ಲುಕ್ ಅವರನ್ನ ಮತ್ತಷಷ್ಟು ಮನಮೋಹಕವಾಗಿ ಕಾಣಿಸುವಂತೆ ಮಾಡಿತ್ತು..
ಸದ್ಯ ಜಾನ್ವಿ ಅವರು ಗುಡ್ಲಕ್ ಜೆರ್ರಿ ಮತ್ತು ಮಿಲಿ ಸಿನಿಮಾಗಳಲ್ಲಿ ನಟಟಿಸುತ್ತಿದ್ದಾರೆ. ಇದಲ್ಲದೆ, ರೂಹಿ ಸಹ-ನಟ ರಾಜ್ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ & ಮಿಸೆಸ್ ಮಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.. ಮುಂದೆ ವರುಣ್ ಧವನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ..