`ಲೋಹಿತ್ ಅಲ್ಪಾಯುಷ್ಯ’ವೆಂದು `ಪುನೀತ್ ಎಂದು ಹೆಸರು’ ಬದಲಾವಣೆ
ಬೆಂಗಳೂರು : ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಇನ್ನು ನೆನೆಪು ಮಾತ್ರ. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಂತೆ ವಿಧಿಯಾಟದಲ್ಲಿ ಅಪ್ಪು ತಮ್ಮ ಪಾತ್ರವನ್ನು ನಿರ್ವಹಿಸಿ ಹೋಗಿದ್ದಾರೆ. ಬಾರದೂರಿಗೆ ಪಯಣಿಸಿದ ರಾಜಕುಮಾರನಿಗೆ ಕರ್ನಾಟಕ ಕಣ್ಣೀರ ವಿದಾಯ ಹೇಳಿದೆ. ರಾಜ್ಯದ ಎಲ್ಲರ ಮನ ಮನೆಯಲ್ಲೂ ಸ್ಥಾನಪಡೆದಿದ್ದ ಅಪ್ಪು ಶಾಶ್ವತವಾಗಿ ಎಲ್ಲರ ನೆನಪಿನಲ್ಲಿ ಉಳಿಯಲಿದ್ದಾರೆ.
ಅಂದಹಾಗೆ ಪುನೀತ್ ರಾಜ್ ಕುಮಾರ್ ಅವರ ಮೊದಲ ಹೆಸರು ಲೋಹಿತ್…!
ಹೌದು..! ಪುನೀತ್ ಅವರಿಗೆ ಮೊದಲು ಲೋಹಿತ್ ಎಂದು ನಾಮಕರಣ ಮಾಡಲಾಗಿತ್ತು. ಆದ್ರೆ ಹರಿಶ್ಚಂದ್ರ ನಾಟಕದಲ್ಲಿ ಲೋಹಿತನಿಗೆ ಅಲ್ಪ ಆಯುಷ್ಯ ಇರೋದ್ರಿಂದ ಮನೆಗಳಲ್ಲಿ ಸ್ವಲ್ಪ ಅಪಸ್ವರ ಇತ್ತು. ಹಿರಿಯರು ಕೂಡ ಹೆಸರು ಚೇಂಜ್ ಮಾಡಬೇಕು ಅಂದಿದ್ದರು. ಹೀಗಾಗಿ ಜ್ಯೋತಿಷ್ಯಗಳ ಸಲಹೆ ಮೆರೆಗೆ ಹೆಸರು ಬದಲಾವಣೆ ಮಾಡಲಾಯಿತ್ತು. ಲೋಹಿತ್ ಬೇಡ ಅಂತಾ ಪುನೀತನಾಗ್ಲಿ ಅಂತಾ ಪುನೀತ್ ರಾಜ್ ಕುಮಾರ್ ಅಂತಾ ಹೆಸರಿಟ್ಟರು. ಆದರೆ
ವಿಧಿಯಾಟ ಹೆಸರು ಬದಲಿಸಿದ್ರೂ ಅಪ್ಪು ಅಲ್ಪಾಯುಷ್ಯರಾಗಿದ್ದಾರೆ.
ಕನ್ನಡ ಚಿತ್ರರಂಗವನ್ನು ಪುನೀತ ಮಾಡಿದ ಅಪ್ಪು ಎಂದೆಂದಿಗೂ ಅಮರ
ಲೋಹಿತ್ ಬೇಡ ಅಂತಾ ಪುನೀತನಾಗ್ಲಿ ಎಂದು ಜ್ಯೋತಿಷ್ಯರ ಸಲಹೆ ಮೇರೆಗೆ ಪುನೀತ್ ರಾಜಕುಮಾರ್ ಎಂದು ಹೆಸರಿಟ್ಟಿದಂತೆ ಅಪ್ಪು ಕನ್ನಡ ಚಿತ್ರರಂಗವನ್ನು ಪುನೀತ ಮಾಡಿದ್ದಾರೆ. ಐದು ತಿಂಗಳಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡ ಅಪ್ಪು, ಕನ್ನಡದ ರಾಜರತ್ನನಾಗಿ ಬೆಳೆದರು. ಕರುನಾಡಿದ ಜನತೆಯ ಹೃಯದ ಸಿಂಹಾಸನ ಅರಸು ಆದರು. ಕನ್ನಡದ ಕೋಟ್ಯಾಧಿಪತಿಯಾದರು. ಚಂದನವನದ ನಟ ಸಾರ್ವಭೌಮರಾದರು. ಕನ್ನಡಿಗರ ಮನದಲ್ಲಿ ಶಾಶ್ವತರಾದರು..