ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ನಾಡು ಬರಡಾಗಿದೆ.
ಅಪ್ಪು ನಮ್ಮನ್ನೆಲ್ಲಾ ಅಗಲಿ ನಾಲ್ಕು ದಿನ ಕಳೆದಿದ್ದರೂ ಅಭಿಮಾನಿಗಳ ಮನದಲ್ಲಿನ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ.
ಬಾರದಲೋಕಕ್ಕೆ ಪಯಣಸಿದ ಅಪ್ಪುಗೆ ಭಾರದ ಮನಸ್ಸಿನಿಂದಲೇ ಇಂದು ಕನ್ನಡ ಚಿತ್ರರಂಗದಿಂದ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅಗಲಿರುವ ಪತಿಯನ್ನ ನೆನೆದು ಭಾವುಕರಾಗಿದ್ದು, ಕಣ್ಣೀರು ಹಾಕಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ರಾಜ್ಯದ ರಾಜಕೀಯ ಗಣ್ಯರು ಸೇರಿದಂತೆ ದಕ್ಷಿಣ ಸಿನಿಮಾ ಇಂಡಸ್ಟ್ರೀಯ ಎಲ್ಲಾ ಖ್ಯಾತ ನಟರು ಭಾಗಿಯಾಗಿದ್ದಾರೆ.