ಅಮೆರಿಕಾ : ಇತ್ತೀಚೆಗೆ ಡಿವೋರ್ಸ್ ವಿಚಾರವಾಗಿ ಸುದ್ದಿಯಾಗಿದ್ದ ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನೆಟ್‍ಫ್ಲಿಕ್ಸ್‍ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.. ಈ ಮೂಲಕ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದ ಪಿಗ್ಗಿ ಇದೇ ಕಾರ್ಯಕ್ರಮದಲ್ಲಿ ತಾಯಿಯಾಗುವುದ್ರ ಸುಳಿವು ನೀಡಿ ಖುದ್ದು ಪತಿ ನಿಕ್ ಜಾನಸ್ ಅವರಿಗೂ ಶಾಕ್ ನೀಡಿದ್ರು..
ಹೌದು ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ಮೊದಲಿಗೆ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದ ಏಕೈಕ ದಂಪತಿ ಎಂದರೆ ನಾನು ಮತ್ತು ನಿಕ್ ಎಂದರು. ಬಳಿಕ ಸದ್ಯದಲ್ಲೇ ನಾವು ಮಕ್ಕಳನ್ನು ಪಡೆಯಲಿದ್ದೇವೆ ಅಂತ ಕೂಡ ಅನೌನ್ಸ್ ಮಾಡಿ ನಿಕ್ ಹಾಗೂ ವೀಕ್ಷಕರಿಗೆ ಶಾಕ್ ನೀಡಿದ್ದಾರೆ. ಪ್ರಿಯಾಂಕಾ ಮಾತು ಕೇಳಿ ಒಂದು ಕ್ಷಣ ನಿಕ್ ಕೂಡ ಗಾಬರಿಯಾಗಿಬಿಟ್ಟಿದ್ರು.. ಆದ್ರೆ ತಕ್ಷಣ ಪ್ರಿಯಾಂಕಾ ತಮಾಷೆಗಾಗಿ ಅಷ್ಟೇ ಹೇಳಿದ್ದು ಎಂದು ನಕ್ಕಿದ್ದಾರೆ.. ಅಂದ್ಹಾಗೆ ಪ್ರಿಯಾಂಕಾ ಅಮೆರಿಕಾದ ಖ್ಯಾತ ಪಾಪ್ ಸ್ಟಾರ್ ನಿಕ್ ಜೋನಾಸ್ ರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿಯೇ ಪತಿ ಜೊತೆಗೆ ನೆಲೆಸಿದ್ದಾರೆ. ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಆದ್ರೆ ಇತ್ತೀಚೆಗೆ ಜೋನಾಸ್ ಹೆಸರನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಿದ್ದರು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಭಾರೀ ಸೌಂಡ್ ಮಾಡಿತ್ತು.. ಆದ್ರೆ ನಿಕ್ ಜೋನಾಸ್ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸ್ವೀಟ್ ಆಗಿ ಕಮೆಂಟ್ ಮಾಡಿ ಗಾಸಿಕ್ ಗಳಿಗೆ ಬ್ರೇಕ್ ಹಾಕಿದ್ರು..