ರಾಜಮೌಳಿ ಸಿನಿಮಾದಲ್ಲಿ ವಿಲ್ಲನ್ ಆಗಲಿದ್ದಾರೆ ವಿಕ್ರಮ್..!
ಬಾಹುಬಲಿ ರಾಜಮೌಳಿ… ಅನ್ನಿಯನ್ ವಿಕ್ರಂ… ಇವರಿಬ್ಬರೂ ಕೂಡ ಅವರ ಅವರ ಕ್ಷೇತ್ರದಲ್ಲಿ ನಿಪುಣರು.. ರಾಜಮೌಳಿ ಡೈರೆಕ್ಷನ್ ಸಿನಿಮಾ ಅಂದ್ರೆ ಅದರ ಮೇಲಿನ ನಿರೀಕ್ಷೆ ದುಪಟ್ಟಾಗಿರುತ್ತೆ.. ಚಿಯಾನ್ ವಿಕ್ರಂ ಸಿನಿಮಾ ಅಂದ್ರೆ ಆ ಸಿನಿಮಾದಲ್ಲಿ ಅವರ ಲುಕ್ ಹೇಗಿರುತ್ತೆ.. ಪಾತ್ರ ಯಾವ ರೀತಿ ಇರುತ್ತೆ ಅನ್ನೋ ಕ್ಯೂರಿಯಾಸಿಟಿ ಅಂತೂ ಇದ್ದೇ ಇರುತ್ತೆ..
ಆದ್ರೆ ಈ ಇಬ್ಬರೂ ಒಂದೇ ಸಿನಿಮಾಗೆ ಒಟ್ಟಾದ್ರೆ ಅದೊಂದು ಡೆಡ್ಲಿ ಕಾಂಬಿನೇಷನ್ ಅಂತಾನೇ ಹೇಳಬಹುದು.. ಅಂದ್ಹಾಗೆ ರಾಜಮೌಳಿ ಅವರು ರಾಮಚರಣ್ , ಜ್ಯೂನಿಯರ್ ಎನ್ ಟಿ ಆರ್ ನಟನೆಯ ಬಹುನಿರೀಕ್ಷೆಯ RRR ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಈ ಸಿನಿಮಾ ಭಾರತೀಯ ಸಿನಿಮಾರಂಗವೇ ಕಾಯುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ..
ಆದ್ರೆ ಈ ಸಿನಿಮಾದ ಜೊತೆಗೆ ರಾಜಮೌಳಿ ತೆರೆಮರೆಯಲ್ಲೇ ಹೊಸ ಸಿನಿಮಾದ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ವಿಕ್ರಮ್ ವಿಲ್ಲನ್ ಆಗೋಕೆ ಹೊರಟಿದ್ದಾರಂತೆ..
ಹೌದು.. ತಮಿಳಿನ ಸ್ಟಾರ್ ನಟ ವಿಕ್ರಮ್ ರಾಜಮೌಳಿ ಅವರ ಇನ್ನೂ ಸೆಟ್ಟೇರದ ಹೊಸ ಸಿನಿಮಾಗೆ ವಿಲ್ಲನ್ ಆಗಲಿದ್ದಾರೆ ಅನ್ನೋ ಸುದ್ದಿ ಈಗ ಸಿನಿಮಾ ಅಂಗಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ.. ಅಂದ್ಹಾಗೆ ರಾಜಮೌಳಿ ಸಿನಿಮಾ ಆಗಿದ್ರೋದಿಂದ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ..
ಅಂದ್ಹಾಗೆ ಈ ಹಿಂದೆಯೇ ರಾಜಮೌಳಿ ಅವರ ಮುಂದಿನ ಸಿನಿಮಾದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.. ಇದೀಗ ಈ ಸಿನಿಮಾದಲ್ಲಿ ಟಾಲಿವುಡ್ ನ ಬಿಗ್ ಸ್ಟಾರ್ ಗೆ ವಿಲ್ಲನ್ ಆಗಿ ತಮಿಳಿನ ಸೂಪರ್ ಸ್ಟಾರ್ ವಿಕ್ರಮ್ ಎಂಟ್ರಿಕೊಡ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ..