ಎಮ್ಮಿ 2021 ಪ್ರಶಸ್ತಿ ಪಟ್ಟಿ ನಿನ್ನೆ ರಿಲೀಸ್ ಆಗಿದೆ.. ಆದ್ರೆ ಈ ಬಾರಿ ಭಾರತಕ್ಕೆ ಭಾರೀ ನಿರಾಸೆಯಾಗಿದೆ. ಈ ಸಾಲಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಶೋಗಳು , ವೆಬ್ ಸರಣಿಗಳು ಸ್ಪರ್ಧೆಗೆ ಇಳಿದಿದ್ವು.. ಭಾರತದಿಂದಲೂ ಕೂಡ ಸ್ಪರ್ಧೆ ಮಾಡಿದ್ವು.. ಆದ್ರೆ ಭಾರತದ ಯಾವುದೇ ವೆಬ್ ಸೀರೀಸ್ , ಶೋಗಳಿಗೆ ಪ್ರಶಸ್ತಿ ಸಿಕ್ಕಿಲ್ಲ.. ಅಷ್ಟೇ ಅಲ್ಲ ವಿವಾದಿತ ಕಾಮಿಡಿಯನ್ ವೀರ್ ದಾಸ್ ಅವರ ಫಾರ್ ಇಂಡಿಯಾ ಶೋ ಕೂಡ ಕಾಮಿಡಿ ವಿಭಾಗದಲ್ಲಿ ಸ್ಪರ್ಧೆ ಮಾಡಿತ್ತು.. ವೀರ್ ದಾಸ್ ಹಾಗೂ ನಟ ನವಾಜುದ್ದೀನ್ ಸಿದ್ಧಿಕಿ ಎಮ್ಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲೂ ಭಾಗಿಯಾಗಿದ್ರು.. ಆದ್ರೆ ಪ್ರಶಸ್ತಿ ಸಿಗದೇ ಬರಿ ಗೈನಲ್ಲಿ ವಾಪಸ್ ಆಗಿದ್ದಾರೆ.
ಗೆದ್ದ ಸೋಗಳು / ಸರಣಿಗಳು ಯಾವುವು..?
ಅತ್ಯುತ್ತಮ ಡಾಕ್ಯುಮೆಂಟರಿ : ಹೋಪ್ ಫ್ರೋಜನ್ : ಎ ಕ್ವಿಸ್ಟ್ ಟು ಲಿವ್ ಟ್ವೈಸ್
ಅತ್ಯುತ್ತಮ ನಟಿ : ಹೈಲೇ ಸ್ಕ್ವೈರ್ಸ್
ಅತ್ಯುತ್ತಮ ನಟ : ಡೇವಿಡ್ ಟೆನಂಟ್
ಅತ್ಯುತ್ತಮ ಕಾಮಿಡಿ ಸೀರೀಸ್ : ಕಾಲ್ ಮೈ ಏಜೆಂಟ್ ಸೀಸನ್ 4
ಅತ್ಯುತ್ತಮ ಡ್ರಾಮಾ ಸೀರೀಸ್ : ತಹ್ರೇನ್
ಕಿರು ಸರಣಿ : ಇನ್ ಸೈಡ್
ಟಿವಿ ಸಿನಿಮಾ : ಅಟ್ಲಾಂಟಿಕ್ ಕ್ರಾಸಿಂಗ್
ಚಿತ್ರಕಥೆ ರಹಿತ ಮನೊರಂಜನಾ ಕಾರ್ಯಕ್ರಮ : ದಿ ಮಾಸ್ಕಡ್ ಸಿಂಗರ್