ಮುಂಬೈ : ಬಾಲಿವುಡ್ ನ ಬೋಲ್ಡ್ ನಟಿ ರಿಚಾ ಚಡ್ಡಾಗೆ ಮೊದಲು ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ ನೂತನ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮೇಲೆ ಲವ್ ಆಗಿತ್ತಂತೆ..
ಸಂದರ್ಶನವೊಂದ್ರಲ್ಲಿ ಮಾತನಾಡಿರುವ ರಿಚಾ ನನ್ನ ಫಸ್ಟ್ ಲವ್ ರಾಹುಲ್ ದ್ರಾವಿಡ್ ಎಂದಿದ್ದಾರೆ. ನಾನು ಆಗ ಕ್ರಿಕೆಟ್ ನ ದೊಡ್ಡ ಅಭಿಮಾನಿಯಾಗಿರಲಿಲ್ಲ.. ಆದ್ರೆ ನನ್ನ ಸಹೋದರ ಕ್ರಿಕೆಟ್ ಆಡ್ತಿದ್ದ.. ಆಗ ನಾನು ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದೆ.. ಆಗ ರಾಹುಲ್ ದ್ರಾವಿಡ್ ಕ್ರಿಕೆಟ್ ಆಡ್ತಿದ್ದ ಪರಿಗೆ ನಾನು ಮೋಡಿಯಾಗಿದ್ದ.. ಅವರು ನಿವೃತ್ತಿ ಪಡೆದ ನಂತರ ನಾನು ಕ್ರಿಕೆಟ್ ನೋಡೋದನ್ನೇ ನಿಲ್ಲಿಸಿದೆ.. ದ್ರಾವಿಡ್ ನನ್ನ ಫಸ್ಟ್ ಲವರ್ ಎಂದಿದ್ದಾರೆ.. ಅಲ್ಲದೇ ಈಗ ದ್ರಾವಿಡ್ ಈಗ ಭಾರತ ತಂಡದ ಹೆಡ್ ಕೋಚ್ ಆಗಿರೋದ್ರಿಂದ ಈಗ ಮತ್ತೆ ಕ್ರಿಕೆಟ್ ಪಂದ್ಯ ನೋಡಲು ನಿರ್ಧರಿಸಿದ್ದಾರಂತೆ..
ಶಕೀಲಾ ಬಯೋಪಿಕ್ ನಲ್ಲಿ ಮಿಂಚಿರುವ ರಿಚಾ ಅನೇಕ ಬೋಲ್ಡ್ ಪಾತ್ರಗಳನ್ನೇ ಮಾಡಿದ್ದಾರೆ.. ಈ ಅಷ್ಟೇ ಅಲ್ಲ ಸದಾ ಬೋಲ್ಡ್ ಹೇಳಿಕೆಗಳನ್ನೂ ನೀಡುತ್ತಲೇ ಸುದ್ದಿಯಲ್ಲಿರುತ್ತಾರೆ..