ಅಭಿಮಾನಿಗಳಿಗೆ ಇಂತಹ ‘ಬೆಂಕಿ’ ಪ್ರಶ್ನೆ ಕೇಳಿದ್ಯಾಕೆ ರಶ್ಮಿಕಾ..!
ಮುಂಬೈ : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಆಗಿ ಟಾಲಿವುಡ್ ಗೆ ಹಾರಿ ಅಲ್ಲಿಯೂ ಮಿಂಚಿ, ನಂತರ ಟಾಲಿವುಡ್ ಈಗ ಬಾಲಿವುಡ್ ನಲ್ಲಿ ಮಿನುಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ… ಸಿನಿಮಾಗಳು ಅಷ್ಟೇ ಅಲ್ದೇ ಆಡ್ ಗಳಲ್ಲೂ ಕಾಣಿಸಿಕೊಳ್ತಿರುವ ರಶ್ಮಿಕಾ ಹಲವಾರು ಪ್ರತಿಷ್ಠಿತ ಕಂಪನಿಗಳ ರಾಯಭಾರಿ ಕೂಡ ಆಗಿದ್ದಾರೆ. ಅಲ್ದೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ..
ಈ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ‘ಕಿಚ್ಚಿ’ನ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಇನ್ಸ್ಟಾಗ್ರಾಮ್ನಲ್ಲಿ, ಬೆಂಕಿಯಲ್ಲಿ ನಡೆಯಬಹುದು ಎಂದು ನೀವು ಭಾವಿಸುತ್ತೀರಿ? ನಿಮ್ಮ ಪ್ರಕಾರ ಕಿಚ್ಚು ಎಂದರೇನು? ಹೋಲಿಕೆಯೇ? ಆತಂಕವೇ? ನಿಮ್ಮ ಕಿಚ್ಚು ಏನು? ಈ ಬಗ್ಗೆ ನೀವು ಯೋಚಿಸುತ್ತೀರಾ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.
‘ಧೈರ್ಯ ಇದ್ದವರೂ ಏನನ್ನಾದರೂ ಗೆಲ್ಲುತ್ತಾರೆ. ಹೌದು, ನೀವು ಮಾಡಬಹುದು. ನಾನು ಸಹ ಈ ಹಿಂದೆ ಭಯದಿಂದ ಇದ್ದೆ. ಆದರೆ ಈಗ ಅದನ್ನು ಬಿಟ್ಟು ಮುಂದೆ ಬಂದಿದ್ದೇನೆ. ಮುಂದೆಯೂ ಸಹ ಇದನ್ನೇ ಮಾಡುತ್ತೇನೆ.. ನನ್ನ ಸಲಹೆಯು ಕೆಲವರಿಗೆ ಸಹಾಯ ಮಾಡಿದರೆ, ಅದು ನನಗೆ ಸಂತೋಷವಾಗುತ್ತದೆ ಎಂದು ಬರೆದು ಕೆಲ ಫೋಟೋಸ್ ಪೋಸ್ಟ್ ಮಾಡಿದ್ದಾರೆ.
ಪ್ರಸ್ತುತ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾಗೆ ಮತ್ತೊಂದು ಬಾಲಿವುಡ್ ಸಿನಿಮಾದ ಆಫರ್ ಸಿಕ್ಕಿದೆ ಎನ್ನಲಾಗ್ತಿದೆ.. ಜೊತೆಗೆ ರಶ್ಮಿಕಾ ನಟನೆಯ ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಬೇಕಿದೆ..