ಕಿರುತೆರೆಯ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ರಾಧಾ ರಮಣ ಜನರ ಅಚ್ಚು ಮೆಚ್ಚಿನ ಆನ್ ಸ್ಕ್ರೀನ್ ಕಪಲ್ ಆಗಿದ್ರು.. ಇವರ ‘ರಾಧಾರಮಣ’ ಧಾರಾವಾಹಿ ಕೂಡ ಫೇಮಸ್ ಆಗಿತ್ತು.. ಈ ನಡುವೆ ಈ ಜೋಡಿಯು ಮತ್ತೊಮ್ಮೆ ಕಿರುತೆರೆಯಲ್ಲಿ ಒಂದಾಗ್ತಿದೆ.. ಹೌದು
ರಮಣ್ ಪಾತ್ರಧಾರಿ ಸ್ಕಂದ ಅಶೋಕ್ ಮತ್ತು ರಾಧಾ ಪಾತ್ರಧಾರಿ ಶ್ವೇತಾ ಮತ್ತೆ ತೆರೆಮೇಲೆ ಒಂದಾಗುತ್ತಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ನಟಿ ಶ್ವೇತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಕಂದ ಅಶೋಕ್ ಜೊತೆಗೆ ತೆಗೆದಿರುವ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಇದು ಅಭಿಮಾನಿಗಳ ಕುತೂಹಲ ಹೆಚಚ್ಚಿಸಿತ್ತು.. ಇದಕ್ಕೆ ಈಗ ಉತ್ತರ ಸಿಕ್ಕಿದೆ.. ಖ್ಯಾತ ಸೀರಿಯಲ್ ಒಂದರಲ್ಲಿ ಸ್ಕಂದ ಅಶೋಕ್ ಮತ್ತು ಶ್ವೇತಾ ಅತಿಥಿ ಪಾತ್ರವನ್ನು ಮಾಡಲಿದ್ದಾರೆ.
ರಾಧೆಶ್ಯಾಮ್ ಧಾರವಾಹಿಯಲ್ಲಿ ಇವರಿಬ್ಬರು ಅತಿಥಿ ಪಾತ್ರ ಮಾಡಲು ಒಂದಾಗಿದ್ದಾರೆ. ಇದೊಂದು ವಿಶೇಷ ಪಾತ್ರವಾಗಿದ್ದು, ಈಗಾಗಲೇ ಇವರ ಪಾತ್ರದ ಪ್ರೋಮೊ ಕೂಡ ರಿಲೀಸ್ ಆಗಿದೆ.. ಪ್ರೋಮೊಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಅಂದ್ಹಾಗೆ ಈಗ ಸ್ಕಂದ ಅಶೋಕ್ ಮತ್ತು ಶ್ವೇತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇವರಿಬ್ಬರು ಬೇರೆ ಬೇರೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ..
ರಾಧಾ ರಮಣ ಧಾರಾವಾಹಿ ಸುಮಾರು 3 ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.. ಸೀರಿಯಲ್ ಅರ್ಧದಲ್ಲಿಯೇ ನಟಿ ಶ್ವೇತಾ ಅವರು ವೈಯುಕ್ತಿಕ ಕಾರಣ ನೀಡಿ ಸೀರಿಯಲ್‌ನಿಂದ ಹೊರನಡೆದಿದ್ದರು . ಅವರ ಜಾಗಕ್ಕೆ ಮತ್ತೆ ಕಾವ್ಯಾ ಗೌಡ ಆಗಮಿಸಿದ್ದರು. ಆದರೇ ಸೀರಿಯಲ್ ಮುಗಿಯುವ ಸಂದರ್ಭದಲ್ಲಿ ಸರಿಯಾದ ಕ್ಲೈಮ್ಯಾಕ್ಸ್ ನೀಡದೇ ಧಾರವಾಹಿಯನ್ನು ನಿಲ್ಲಿಸಲಾಗಿತ್ತು. ಇದು ರಾಧಾ ರಮಣ ಸೀರಿಯಲ್ ಪ್ರಿಯರಿಗೆ ಸಾಕಷ್ಟು ಬೇಸರ ಉಂಟು ಮಾಡಿತ್ತು.
ಹೀಗಾಗಿ ಮತ್ತೆ ರಾಧರಮಣ ಸೀರಿಯಲ್ ಅನ್ನು ಪ್ರಸಾರ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದ್ದವು..