ಮುಂಬೈ: ಬಾಲಿವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಅಭಿನಯದ ಅಂತಿಮ್: ದಿ ಫೈನಲ್ ಟ್ರೂಥ್ ಸಿನಿಮಾ ರಿಲೀಸ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಈ ನಡುವೆ ಅಲ್ಲಲ್ಲಿ ಅಭಿಮಾನಿಗಳ ಸಂಭ್ರಮವೂ ಕೊಂಚ ಜೋರಾಗಿಯೇ ಇದೆ.. ಆದ್ರೆ ಸಂಭ್ರಮಾಚರಣೆ ವೇಳೆ ಥಿಯೇಟರ್ ಗಳಲ್ಲಿ ಪಟಾಕಿಗಳನ್ನ ಹೊಡೆಯೋದು ಗೊತ್ತಾಗ್ತಿದೆ.. ಹೀಗಾಗಿ ಸಲ್ಮಾನ್ ಖಾನ್ ಅಭಿಮಾನಿಗಳ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.. ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಚಿತ್ರಮಂದಿರ ಒಳಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ.
ಶುಕ್ರವಾರ ತೆರೆಕಂಡಿತ್ತು. ಈ ವೇಳೆ ಚಿತ್ರ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಎಂಟ್ರಿ ಆಗುತ್ತಿದ್ದಂತೆಯೇ ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೀಡಿಯೋವನ್ನು ಸಲ್ಮಾನ್ ಖಾನ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಈ ರೀತಿ ವರ್ತಿಸದಂತೆ ವಿನಂತಿಸಿದ್ದಾರೆ.
ಪಟಾಕಿಗಳನ್ನು ಥಿಯೇಟರ್ ಒಳಗೆ ತೆಗೆದುಕೊಂಡು ಹೋಗದಂತೆ ಅಭಿಮಾನಿಗಳಲ್ಲಿ ನಾನು ವಿನಂತಿಸುತ್ತೇನೆ. ಏಕೆಂದರೆ ಇದರಿಂದ ಭಾರೀ ಬೆಂಕಿ ಅವಘಡ ಸಂಭವಿಸಬಹುದು. ಇದರಿಂದಾಗಿ ನಿಮಗೂ ಮತ್ತು ಇತರರಿಗೂ ಅಪಾಯವಾಗುತ್ತದೆ. ಚಿತ್ರಮಂದಿರದ ಒಳಗೆ ಪಟಾಕಿ ತೆಗೆದುಕೊಂಡು ಹೋಗದಂತೆ ಸೆಕ್ಯೂರಿಟಿಗಳು ಪ್ರವೇಶ ದ್ವಾರದಲ್ಲಿಯೇ ಪರಿಶೀಲನೆ ನಡೆಸಿ ನಂತರ ಪ್ರೇಕ್ಷಕರನ್ನು ಒಳಗೆ ಬಿಡಬೇಕೆಂದು ನಾನು ಥಿಯೇಟರ್ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ಸಿನಿಮಾವನ್ನು ನೋಡಿ ಆನಂದಿಸಿ. ಆದರೆ ದಯವಿಟ್ಟು ಈ ರೀತಿ ಎಲ್ಲಾ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.