‘ಮೆಗಾಸ್ಟಾರ್’ ಜೊತೆಗೆ ‘ಮುನ್ನಾಬಾಯ್’ ಕಾದಾಟ..!
ಹೈದ್ರಾಬಾದ್ : ಮೆಗಾಸ್ಟಾರ್ ಚಿರಂಜೀವಿಗೆ ಸಂಜು ಬಾಬಾ ವಿಲ್ಲನ್ ಆಗಲಿದ್ದಾರೆ.. ಹೌದು KGF 2 ನಲ್ಲಿ ಈಗಾಗಲೇ ಅಧೀರನಾಗಿ ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಹೊರಟಿರುವ ಸಂಜಯ್ ದತ್ ಈಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ..
ಚಿರಂಜೀವಿ ಸಿನಿಮಾದಲ್ಲಿ ಸಂಜಯ್ ದತ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಲಿದ್ದಾರೆ. ಅಂದ್ಹಾಗೆ ಗಾಡ್ ಫಾದರ್ ಸಿನಿಮಾದಲ್ಲಿ ಸಂಜಯ್ ದತ್ ವಿಲ್ಲನ್ ಆಗಿದ್ದಾರೆ.. ಸಿನಿಮಾತಂಡ ಸಂಜಯ್ ದತ್ ಅವರು ಸಿನಿಮಾದಲ್ಲಿ ನಟಿಸುತ್ತಿರುದನ್ನ ಇನ್ನೂ ಅಧಿಕೃತಗೊಳಿಸಿಲ್ಲ.. ಆದ್ರೆ ಶೀಘ್ರದಲ್ಲೇ ಭರ್ಜರಿಯಾಗಿಯೇ ಅನೌನ್ಸ್ ಮಾಡುವ ತಯಾರಿ ನಡೆಸಿಕೊಳ್ತಿದೆ ಎನ್ನಲಾಗಿದೆ..
ಗಾಡ್ ಫಾದರ್ 2019ರಲ್ಲಿ ತೆರೆಕಂಡ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಆಗಿದೆ. ಸೂಪರ್ ಗುಡ್ ಫಿಲ್ಮ್ಸ್ ಸಹಯೋಗದಲ್ಲಿ, ಕೊನಿಡೇಲಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಹಿಂದೆ ಗಾಡ್ ಫಾದರ್ ಚಿತ್ರದಲ್ಲಿ ಚಿರಂಜೀವಿಯ ತಂಗಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಂತರ, ಈ ಪಾತ್ರಕ್ಕೆ ರಮ್ಯಾ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮೋಹನ್ ರಾಜಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಲಿದೆ. ಈ ಚಿತ್ರದಲ್ಲಿ ಚಿರಂಜೀವಿ ಜೊತೆಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ನಟ ಚಿರಂಜೀವಿ ಅಭಿನಯದ ಗಾಡ್ ಫಾದರ್ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ತಾರಾಬಳಗವಿದೆ..