ಖ್ಯಾತ ನಿರ್ದೇಶಕ ದಿವಂಗತ ಕಾಶಿನಾಥ್ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿರುವ, ಕಿರಣ್ ಸೂರ್ಯ ನಿರ್ದೇಶನದ ಸಿನಿಮಾ “ಎಲ್ಲಿಗೆ ಪಯಣ ಯಾವುದೋ ದಾರಿ”ಯ ಶೂಟಿಂಗ್ ಮುಗಿದಿದೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಮುಂತಾದ ಕಡೆ 108 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಿರಣ್ ಸೂರ್ಯ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುದರ್ಶನ ಆರ್ಟ್ಸ್ ಲಾಂಛನದಲ್ಲಿ ಜತಿನ್ ಜಿ ಪಟೇಲ್ ಹಾಗೂ ಚೇತನ್ ಕೃಷ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲು ಎರಡು ಹಾಡಗಳಿದ್ದು, ಅನಂತ ಕಾಮತ್ ಸಂಗೀತವಿದೆ.. ವಿಶೇಷ ಅಂದ್ರೆ ಈ ಚಿತ್ರದ ಒಂದು ಹಾಡಿಗೆ ಕಿಚ್ಚ ಸುದೀಪ ಹಾಡಿದ್ದಾರೆ. ಆ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸತ್ಯ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ ಹಾಗೂ ವಿಶ್ವ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಅಭಿಮನ್ಯು ಅವರಿಗೆ ನಾಯಕಿಯರಾಗಿ ಸ್ಪೂರ್ತಿ ಉಡಿಮನೆ ಹಾಗೂ ವಿಜಯಶ್ರೀ ಕಲಬುರ್ಗಿ ನಟಿಸಿದ್ದಾರೆ. ಬಲ ರಾಜವಾಡಿ ಚಿತ್ರರಂಗ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.