ಇಷ್ಟು ದಿನಗಳಿಂದ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ‘ಮದಗಜ’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ.. ಇಂದಿನಿಂದ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ರಿಲೀಸ್ ಮುನ್ನವೇ ಫಸ್ಟ್ ಶೋ ಟೆಕೆಟ್ ಗಳು ಸೋಲ್ಡ್ ಔಟ್ ಆಗಿದ್ದವು..
25 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.. ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿಸಿತ್ತು.. ಇದೀಗ ಸಿನಿಮಾ ಸಿಲ್ವರ್ ಸ್ಕ್ರೀನ್ ಗೂ ಕೂಡ ಎಂಟ್ರಿಕೊಟ್ಟಿದ್ದು, ರೋರಿಂಗ್ ಫ್ಯಾನ್ಸ್ ಸಂಭ್ರಮಾಚರಣೆ ಜೋರಾಗಿಯೇ ಇದೆ..
ಅಂದ್ಹಾಗೆ ಕರ್ನಾಟಕದಲ್ಲಿಯೇ ಸುಮಾರು 800 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಈಗಾಗಲೇ ಹಲವೆಡೆ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಅಂದ್ಹಾಗೆ ಈ ತಿಂಗಳ ಆರಂಭದಲ್ಲೇ ಕನ್ನಡದ ಬಹುನಿರೀಕ್ಷೆಯ ಸಿನಿಮಾ ಗ್ರ್ಯಾಂಡ್ ಆಗಿ ಎಂಟ್ರಿ ಪಡೆಯೋ ಮೂಲಕ ಕಿಚ್ಚು ಹೆಚ್ಚಿಸಿದೆ..
ಎಸ್. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಗೆ ಎದುರಾಳಿಗಳಾಗಿ ಜಗಪತಿ ಬಾಬು ಗರುಡ ರಾಮ್ ಟೆರರ್ ಆಗಿ ಕಾಣಿಸಿಕೊಂಡಿದ್ರೆ , ಕ್ಲಾಸಿ ಲುಕ್ ನಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಮಿಂಚಿದ್ದಾರೆ.. ರವಿಬಸ್ರೂರು ಸಂಗೀತವಿರುವ ಸಿನಿಮಾ ಕನ್ನಡ , ತೆಲುಗು , ತಮಿಳಿನಲ್ಲಿ ರಿಲೀಸ್ ಆಗಿದ್ದು, ಉಮಾಶಂಕರ್ ಬಂಡವಾಳ ಹೂಡಿದ್ದಾರೆ..