ಬಾಲಿವುಡ್ ನ ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.. ಅಧಿಕೃತವಾಗಿ ಈವರೆಗೂ ತಮ್ಮ ಮದುವೆ ಗುಟ್ಟು ಬಿಟ್ಟು ಕೊಡದ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಅಂತು ಇಂತೂ ಅದ್ಧೂರಿಯಾಗಿ ರಾಜಸ್ಥಾನದ ಐಶಾರಾಮಿ ಹೋಟೆಲ್ ನಲ್ಲಿ ಮದುವೆ ಆಗಿದ್ದಾರೆ.. ಈ ಜೋಡಿಯ ಮದುವೆ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಅಭಿಮಾನಿಗಳು ಇಬ್ಬರಿಗೂ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನೆರವೇರಿದೆ. ಡಿ.9ರಂದು ಈ ಜೋಡಿ ಹಸೆಮಣೆ ಏರಿದೆ. ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಇಬ್ಬರೂ ಖಾತೆಗಳಲ್ಲಿ ಒಂದೇ ಫೋಟೋಗಳನ್ನ ಹಂಚಿಕೊಂಡಿದ್ದು ಒಂದೇ ಕ್ಯಾಪ್ಷನ್ ಕೊಟ್ಟಿರೋದು ಗಮನಾರ್ಹವಾಗಿದೆ.. ಈ ಕ್ಷಣಕ್ಕೆ ನಮ್ಮನ್ನು ಕರೆತಂದವರಿಗೆ ಪ್ರೀತಿಯ ಮತ್ತು ಕೃತಜ್ಞತೆ. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.. ಇನ್ನೂ ದೀಪಿಕಾ ಪಡುಕೋಣೆ , ಆಲಿಯಾ ಭಟ್ ಸೇರಿದಂತೆ ಹಲವರು ಈ ಜೋಡಿಗೆ ಕಮೆಂಟ್ ಮಾಡಿ ಶುಭಹಾರೈಸಿದ್ದಾರೆ.. ದೀಪಿಕಾ ಪಡುಕೋಣೆ “ಜೀವನಪೂರ್ತಿ ನೀಮ್ಮಿಬ್ಬರ ನಡುವೆ ಪ್ರೀತಿ, ನಗು, ನಿಷ್ಠೆ, ಗೌರವ ಇರಲಿ ಎಂದು ಶುಭಾಶಯಗಳನ್ನ ತಿಳಿಸಿದ್ಧಾರೆ..
ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್ನಲ್ಲಿ ಇಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತಿಥಿಗಳಿಗೆ ಫೋಟೋ , ವಿಡಿಯೋಗಳನ್ನ ಸೆರೆಹಿಡಿಯದಂತೆ ನಿಯಮ ವಿಧಿಸಲಾಗಿತ್ತು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವಿಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆ ಅಮೇಜಾನ್ ಪ್ರೈಮ್ ಗೆ 80 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಕೂಡ ವರದಿಯಾಘಿದೆ..
ಕತ್ರಿನಾ ಕೈಫ್ ಸಾಂಪ್ರದಾಯಿಕವಾಗಿ ಕಂಪೆ ಸೀರೆಯಲ್ಲಿ ಕೈತುಂಬಾ ಮೆಹಂದಿ , ಮೈ ತುಂಬಾ ಒಡೆಗಳನ್ನ ಧರಿಸಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.. ಅಂದ್ಹಾಗೆ ಕತ್ರಿನಾ ವಿದೇಶಿ ಪ್ರಜೆಯಾಗಿದ್ದು, ಭಾರತದಲ್ಲಿ ಸಿನಿಮಾ ಬದುಕು ಆರಂಭಿಸಿದ್ದರು.. ಬಳಿಕ ಸಿನಿಮಾಗಳ ಮೂಲಕ ಭಾರತೀಯ ಅಭಿಮಾನಿಗಳ ಹೃದಯದಲ್ಲಿ ಸ್ಥಾನಪಡೆದಿರುವ ಕ್ಯಾಟ್ ಇದೀಗ ಭಾರತದ್ದೇ ಹುಡುಗನನ್ನ ಪ್ರೀತಿಸಿ ಭಾರತೀಯ ಸಂಸ್ಕೃತಿಯಂತೆಯೇ ಮದುವೆಯಾಗಿ ಸಂಪೂರ್ಣವಾಗಿ ಭಾರತದವರೇ ಆಗಿದ್ದಾರೆ..
ಅಂದ್ಹಾಗೆ ಕ್ಯಾಟ್ ವಿಕ್ಕಿಗಿಂತ 5 ವರ್ಷ ದೊಡ್ಡವರು.. ಕ್ಯಾಟ್ ಗೆ 38 ವರ್ಷ.. ವಿಕ್ಕಿ ಕೌಶಲ್ ಗೆ 33 ವರ್ಷ.. ಹಾಗಂತ ನಟಿಯರು ವಯಸ್ಸಿಗಿಂತ ಚಿಕ್ಕವರಿಗಿಂತ ಮದುವೆಯಾಗಿರೋದು ಇದೇನು ಮೊದಲಲ್ಲ.. ಐಶ್ವರ್ಯ ರೈ – ಅಭಿಶೇಕ್ ಬಚ್ಚನ್ , ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್ ದಂಪತಿ ಇದಕ್ಕೆ ಉದಾಹರಣೆ..