ಕನ್ನಡದಲ್ಲಿ ಟ್ವೀಟ್ ಮಾಡಿ ‘ಬ್ರಹ್ಮಾಸ್ತ್ರ’ದ ಬಗ್ಗೆ ತಿಳಿಸಿದ ಆಲಿಯಾ..!
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ ಕನ್ನಡದಲ್ಲಿ ಸಹ ತೆರೆಕಾಣಲಿದೆ. ಈಗಾಗಿ ಆ ಚಿತ್ರದ ಬಗ್ಗೆ ನಟಿ ಆಲಿಯಾ ಭಟ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
‘ಬ್ರಹ್ಮಾಸ್ತ್ರ ಸಿನಿಮಾ ಮೂರು ಪಾರ್ಟ್ಗಳಲ್ಲಿ ತೆರೆಗೆ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ಬ್ರಹ್ಮಾಸ್ತ್ರ ಸಿನಿಮಾದ ಪ್ರಮೋಷನ್ ಗಾಗಿ ಆಲಿಯಾ ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಿ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ದಕ್ಷಿಣ ಭಾರತೀಯರ ಗಮನ ಸೆಳೆದಿದ್ದಾರೆ.
ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ Introducing ‘SHIVA’! 09.09.2022 ಈ ದಿನಾಂಕದೊಂದಿಗೆ Brahmastra Part One : Shiva ನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ! ಎಂದು ಆಲಿಯಾ ಭಟ್ ಟ್ವಿಟ್ ಮಾಡಿದ್ದಾರೆ.