ಕಪಿಲ್ ದೇವ್ ಬಯೋಪಿಕ್ ‘83’ ಸಿನಿಮಾಗೆ ಟ್ಯಾಕ್ಸ್ ಇಲ್ಲ..!
ಮುಂಬೈ : ಭಾರತದ ಕ್ರಿಕೆಟ್ ದಂಥಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ ‘83’ ಡಿಸೆಂಬರ್ 24 ರಂದು ಹಿಂದಿ, ಕನ್ನಡ , ತಮಿಳು , ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.. ಈಗಾಗಲೇ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.. ಸಿನಿಮಾದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರದಲ್ಲಿ ಮಿಂಚಿದ್ರೆ , ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ..
ಈ ಸಿನಿಮಾ ಭಾರತೀಯರ ಪಾಲಿಗೆ ತುಂಬಾ ವಿಶೇಷ.. ಕಾರಣ 1983ರಲ್ಲಿ ವಿಶ್ವಕಪ್ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡ ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ.. ಇದೀಗ ಭಾರತದ ಜೊತೆಗೆ ಒಂದ್ ರೀತಿ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವ ‘83’ ಸಿನಿಮಾಗೆ ದೆಹಲಿ ಸರ್ಕಾರ ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದೆ.
1983ರಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಕಥೆಯ ಆಧಾರದ ಮೇಲೆ ಸಿನಿಮಾವನ್ನು ರಚಿಸಲಾಗಿದೆ. ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಭಾರತ ತಂಡ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಪಡೆದಿತ್ತು.
ನಟ ರಣವೀರ್ ಸಿಂಗ್ ಅಭಿನಯದ ಚಿತ್ರ’83’ ಟ್ಯಾಕ್ಸ್ ಫ್ರೀ ಆಗಿರಲಿದೆ ಎಂದು ನಿರ್ಮಾಪಕ ಕಬೀರ್ ಖಾನ್ ಮಂಗಳವಾರ ಘೋಷಿಸಿದ್ದಾರೆ. ರಿಲಯನ್ಸ್ ಎಂಟರ್ಟೈನ್ಮೆಂಟ್ ಮತ್ತು ಫ್ಯಾಂಟಮ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ 83 ಸಿನಿಮಾದಲ್ಲಿ ತ್ರಿಪಾಟಿ, ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಂ, ಜತಿನ್ ಸರ್ನಾ, ಚಿರಾಗ್ ಪಾಟೀಲ್, ಸೇರಿದಂತೆ ಸ್ಟಾರ್ ನಟರ ತಾರಾಬಳಗವೇ ಇದೆ..