ರಶ್ಮಿಕಾ ಮಂದಣ್ಣ ಅಲ್ಲ… ರಸ್ಮಿಕಾ ಮಡೋನ…. ಪುಷ್ಪ ಸಿನಿಮಾದಲ್ಲಿ ರಶ್ಮಿಕಾಗೆ ಅವಮಾನ..??
ಕನ್ನಡದ ಮೂಲಕ ಹೆಸರು ಗಳಿಸಿ ಪ್ರಸ್ತುತ ಟಾಲಿವುಡಡ್ ನಲ್ಲಿ ನೆಲೆಯೂರಿರುವ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಸಕಕ್ಸಸ್ ನಲ್ಲಿ ತೇಲಾಡ್ತಿದ್ದಾರೆ.. ಆದ್ರೆ ಇದೇ ಸಿನಿಮಾದ ವಿರುದ್ಧ ಈಗ ರಶ್ಮಿಕಾ ಅಭಿಮಾನಿಗಳು ಬೇಸರಗೊಂಡಿದ್ರೆ ಟ್ರೋಲಿಗರಿಗೆ ಟ್ರೋಲ್ ಮಾಡಲು ಮತ್ತೊಂದು ಕಂಟೆಂಟ್ ಸಿಕ್ಕಿದೆ.. ಹೌದು ತೆಲುಗಿನಲ್ಲಿ ಪ್ರಸ್ತುತ ಬಹು ಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿರುವ ರಶ್ಮಿಕಾ ಹೆಸರನ್ನು ಪುಷ್ಪ ಸಿನಿಮಾದಲ್ಲಿಯೇ ತಪ್ಪಾಗಿ ಹಾಕಲಾಗಿದೆ..
ಹೌದು.. ರಶ್ಮಿಕಾ ಮಂದಣ್ಣ ಬದಲಾಗಿ , ರಸ್ಮಿಕಾ ಮಡೋಣ ಎಂದು ಹಾಕುವ ಮೂಲಕ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯರ ಪರ ಅಸಡ್ಡೆಯನ್ನ ಪ್ರದರ್ಶಿಸಲಾಗಿದೆ ಎಂದು ರಶ್ಮಿಕಾ ಫ್ಯಾನ್ಸ್ ಬೇಸರಗೊಂಡಿದ್ದಾರೆ.. ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಪುಷ್ಪ’ ಸಿನಿಮಾವನ್ನು ಹಲವು ಮಂದಿ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಡಿಸೆಂಬರ್ 07ರಂದು ‘ಪುಷ್ಪ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಸಿನಿಮಾ ಅಂತ್ಯವಾದ ಬಳಿಕ ಟೈಟಲ್ ಕಾರ್ಡ್ಪ್ರದರ್ಶಿಸಲಾಗಿದೆ.
ಪ್ರತಿಯೊಬ್ಬ ನಟರ ಚಿತ್ರದೊಟ್ಟಿಗೆ ಇಂಗ್ಲೀಷ್ನಲ್ಲಿ ಅವರ ಹೆಸರನ್ನು ಹಾಕಲಾಗಿದೆ. ಮೊದಲಿಗೆ ನಾಯಕ ಅಲ್ಲು ಅರ್ಜುನ್, ನಂತರ ನಟ ಫಹಾದ್ ಫಾಸಿಲ್ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಹಾಕಲಾಗಿದೆ. ಆದರೆ ಇಂಗ್ಲೀಷ್ನಲ್ಲಿ ರಶ್ಮಿಕಾ ಮಂದಣ್ಣ ಎಂದು ಬರೆವ ಬದಲಿಗೆ ‘ರಸ್ಮಿಕಾ ಮಡೊನಾ’ ಎಂದು ಬರೆಯಲಾಗಿದೆ. ಒಂದೆಡೆ ಸಿನಿಮಾದಲ್ಲಿ ಫಹಾದ್ ಫಾಸಿಲ್ , ಅಲ್ಲು ಅರ್ಜುನ್ ನಟನೆಯನ್ನ ಜನ ಹೊಗಳುತ್ತಿದ್ರೆ , ರಶ್ಮಿಕಾ ನಟನೆಗೂ ಪ್ರಶಂಸೆ ಧಕ್ಕದ ಕಾರಣಕ್ಕೆ ಕೆರಳಿದ್ದ ಅಭಿಮಾನಿಗಳು ಈಗ ಮತ್ತೆ ಸಿಟ್ಟಾಗಿದ್ದಾರೆ…