ಬಾಲಿವುಡ್ ಖಾನ್ ಗಳನ್ನ ಮುಂದೆ ಘರ್ಜಿಸಿದ ಅಲ್ಲು ಅರ್ಜುನ್..!!
ಡಿಸೆಂಬರ್ 17 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗಿ ಇನ್ನೂವರೆಗೂ ಅಧ್ಬತ ಪ್ರದರ್ಶನ ಕಾಣ್ತಿರುವ ಪುಷ್ಪ ಸಿನಿಮಾಗೆ ಹೆಚ್ಚು ಕ್ರೇಜ್ ಹಿಂದಿಯಲ್ಲೇ ಇದೆ.. ಬಾಲಿವುಡ್ ಮಂದಿಯಲ್ಲಿ ‘ಪುಷ್ಪರಾಜ್’ ಕ್ರೇಜ್ ಒಂದ್ ರೇಂಜ್ ಗೆ ಹೊಗಿದ್ದು , ಅಲ್ಲುಗೆ ಹಿಂದಿಯಲ್ಲಿ ಫ್ಯಾನ್ಸ್ ಗಳ ಸಂಖ್ಯೆ ಹೆಚ್ಚಾಗಿದ್ದಾರೆ..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸರುವ ಪುಷ್ಪ ಸಿನಿಮಾ ಹಿಂದಿ ವರ್ಷನ್ ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ.. ಬಾಲಿವುಡ್ ಸಿನಿಮಾ ತಾರೆಯರೇ ಪುಷ್ಟವನ್ನ ಹೊಗುಳುತ್ತಿದ್ದಾರೆ.. ಈ ನಡುವೆ ಬಾಲಿವುಡ್ ನ ವಿವಾದಾತ್ಮಕ ನಟ, ನಿರ್ಮಾಪಕರಾಗಿಯೇ ಗುರುತಿಸಿಕೊಂಡಿರುವ ಕಮಾಲ್ ರಶೀದ್ ಖಾನ್ ಅಲ್ಲು ಅರ್ಜುನ್ ಅವರನ್ನ ಕೊಂಡಾಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ..
ಹೌದು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಮಾಲ್ , ಅಲ್ಲು ಅರ್ಜುನ್ ಪುಷ್ಪ ಚಿತ್ರದ ಮೂಲಕ ಬಾಲಿವುಡ್ ಖಾನ್ಗಳನ್ನು ಮೀರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಅಲ್ಲು ಅರ್ಜುನ್ಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ನಲ್ಲಿ ಅಲ್ಲು ಸಿನಿಮಾ ಮಾಡ್ತಾರಾ ಅನ್ನೋ ಚರ್ಚೆಗಳು ಕೂಡ ಎದ್ದಿವೆ.. ಅಷ್ಟೇ ಅಲ್ಲದೇ ಅಪ್ಪಿ ತಪ್ಪಿ ಬಾಲಿವುಡ್ ನಿಂದ ಆಫರ್ ಬಂದ್ರೂ ಅಲ್ಲು ಇನ್ನು ಮುಂದೆ ಅಲ್ಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾತ್ರ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಪುಷ್ಪ ಹಿಂದಿಯಲ್ಲಿ 80 ಕೋಟಿ ಗಳಿಸಿ ದಾಖಲೆ ಬರೆದಿದೆ. ಒಟ್ಟಾರೆ ವಿಶ್ವದಾದ್ಯಂತ ಕಲೆಕ್ಷನ್ 400 ಕೋಟಿಯತ್ತ ಸಾಗುತ್ತಿದೆ. ಇದರಲ್ಲಿ 80 ಕೋಟಿ ರೂ. ಪಾಲು ಹಿಂದಿ ಅವತರಣಿಕೆಯದ್ದೇ ಆಗಿರೋದು ಆಶ್ಚರ್ಯವೂ ಹೌದು ಖುಷಿ ವಿಚಾರವೂ ಹೌದು.. ಅಷ್ಟೇ ಅಲ್ಲ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘83’ ಕೂಡ ಪುಷ್ಪರಾಜನ ಮುಂದೆ ಮಂಡಿಯೂರಬೇಕಾಯ್ತು.. ಪುಷ್ಪ ಕ್ರೇಜ್ ಮುಂದೆ ಬಾಕ್ಸ್ ಆಫೀಸ್ ನಲ್ಲಿ 83 ಅಬ್ಬರ ನಡೆಯಲಿಲ್ಲ..