RamCharan | ದ್ವಿಪಾತ್ರದಲ್ಲಿ ಮೆಗಾ ಪವರ್ ಸ್ಟಾರ್
ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯ ತ್ರಿಬಲ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದು, ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಹೀಗೆ ರಾಮ್ ಚರಣ್ ರ ಎರಡು ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿವೆ. ಇದರ ನಡುವೆ ಟಾಲಿವುಡ್ ನಲ್ಲಿ ರಾಮ್ ಚರಣ್ ಕುರಿತಾಗಿ ಸುದ್ದಿವೊಂದು ಸಖತ್ ಟ್ರೆಂಡ್ ಆಗುತ್ತಿದೆ. ಅದೇನಂದರೇ ರಾಮ್ ಚರಣ್ ತಮ್ಮ 15 ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಹೌದು..! ರಾಮ್ ಚರಣ್ ರ 15 ನೇ ಸಿನಿಮಾವನ್ನು ಭಾರಿ ಬಜೆಟ್ ನಲ್ಲಿ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಇದಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಪೊಲಿಟಿಕಲ್ ಬ್ಯಾಕ್ ಗ್ರಾಪ್ ನಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಸಿನಿಮಾದಲ್ಲಿ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಲಿದ್ದಾರಂತೆ. ಒಂದು ಪಾತ್ರದಲ್ಲಿ ಅಧಿಕಾರಿಯಾಗಿದ್ದರೇ ಮತ್ತೊಂದು ಪಾತ್ರದಲ್ಲಿ ಕೂಲಿಯಾಗಿರಲಿದ್ದಾರೆ ಅನ್ನೋದು ಟಾಲಿವುಡ್ ಮೂಲಗಳ ಮಾಹಿತಿ.
ಅಂದಹಾಗೆ ರಾಮ್ ಚರನ್ ದ್ವಿಪಾತ್ರದಲ್ಲಿ ನಟಿಸುತ್ತಿರೋದು ಇದು ಮೊದಲಲ್ಲ. ಈ ಹಿಂದೆ ನಾಯಕ್ ಸಿನಿಮಾದಲ್ಲಿ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಪ್ರೇಕ್ಷಕರ ಮನ ಗೆದ್ದಿದ್ದರು.
ಇನ್ನು ಆರ್ ಸಿ 15 ಸಿನಿಮಾ ವಿಚಾರಕ್ಕೆ ಬಂದರೇ ಕಿಯಾರಾ ಅಡ್ವಾಣಿ ನಾಯಕಿಯಾಗಿ ರಾಮ್ ಚರಣ್ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ. ಕತೆಯಲ್ಲಿ ರಾಜಕೀಯದ ಥ್ರಿಲ್ಲರ್ ಅಂಶಗಳು ಅಡಗಿವೆ. ಹಾಗಾಗಿ ರಾಮ್ ಚರಣ್ ಯಾವ ಯಾವ ಪಾತ್ರಗಳಲ್ಲಿ ಕಾಣಿಸಕೊಳ್ಳುತ್ತಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.
ram charan double role in rc 15 film