Arjun Rampal ಪ್ರೇಯಸಿ ಮಗುವಿಗೆ ಜನ್ಮ ನೀಡಿದ್ರೂ ಮದ್ವೆ ಬೇಡ ಎನ್ನುತ್ತಿರುವ ಅರ್ಜುನ್
ಬಾಲಿವುಡ್ ಸ್ಟಾರ್ ಅರ್ಜುನ್ ರಾಂಪಾಲ್ ಅವರು ಪತ್ನಿ ಮೆಹರ್ ಜೆಸಿಯಾ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ ನಟಿ ಗೇಬ್ರಿಯೆಲಾ ಡೆಮೆಟ್ರಿಯೊಸ್ ಗೆ ಹತ್ತಿರವಾಗಿದ್ದಾರೆ.
ಇಬ್ಬರ ನಡುವಿನ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಯಾಗಿ ಮಾರ್ಪಟ್ಟಿತ್ತು. ಅವರ ಪ್ರೀತಿಯ ಸಂಕೇತವಾಗಿ ಮಗು ಕೂಡ ಜನಿಸಿದೆ.
ಆ ಮಗುವಿಗೆ ಅರಿಕ್ ಎಂದು ನಾಮಕರಣವನ್ನೂ ಕೂಡ ಮಾಡಲಾಗಿದೆ. ಆದರೆ, ಜೋಡಿಯಾಗಿ ಬದುಕುತ್ತಿದ್ದರೂ ಮದುವೆಯಾಗುವ ಇರಾದೆ ಇಲ್ಲ ಎನ್ನುತ್ತಾರೆ ಅರ್ಜುನ್.
ತಮ್ಮಿಬ್ಬರ ಸಂಬಂಧವನ್ನು ಸಾಬೀತುಪಡಿಸಲು ಕಾಗದದ ತುಂಡುಗಳ ಅಗತ್ಯವಿಲ್ಲ ಎಂದು ಅರ್ಜುನ್ ಸ್ಪಷ್ಟಪಡಿಸಿದ್ದಾರೆ.
ನಮ್ಮ ಬಂಧವನ್ನು ದೃಢಪಡಿಸುವ ಮದುವೆ ನನ್ನ ಗೆಳತಿಗೆ ಇಷ್ಟವಿಲ್ಲ. ಆದರೂ ಮನಸುಗಳು ಒಂದಾಗಿದೆ ಅಂದ್ರೆ ನಮಗೆ ಮದುವೆ ಆಗಿದೆ ಎಂದರ್ಥ ಎಂದು ಅರ್ಜುನ್ ಹೇಳಿದ್ದಾರೆ.
ಅಂದಹಾಗೆ ಅರ್ಜುನ್ ಮತ್ತು ಗೇಬ್ರಿಯೆಲ್ಲಾ ಕಾಮನ್ ಫ್ರೆಂಡ್ಸ್ ಮೂಲಕ ಪರಸ್ಪರ ಪರಿಚಯವಾಗಿದ್ದರು.
ಆ ಪರಿಚಯ ಪ್ರೀತಿಯಾಗಿ ಬದಲಾದ ಬಳಿಕ ಇಬ್ಬರೂ ಡೇಟಿಂಗ್ ನಲ್ಲಿದ್ದರು.
ಈ ಕ್ರಮದಲ್ಲಿ 2019 ರಲ್ಲಿ ಗೇಬ್ರಿಯೆಲಾ ಗರ್ಭವತಿಯಾದಾಗ ತಮ್ಮಿಬ್ಬರ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
Arjun Rampal reveals girlfriend Gabriella Demetriades is not ‘into marriage