ಶ್ರೀದೇವಿ ಅಂತ ಆಗಿದ್ದು ಮತ್ತೆ ಶ್ರೀವಲ್ಲಿ ಆಗಿದ್ಹೇಗೆ..???
ಸೆನ್ಷೇಷನ್ ಸೃಷ್ಟಿಸಿರುವ ಪುಷ್ಪಾ ಸಿನಿಮಾದ ಸಿಕ್ಕಾಪಟ್ಟೆ ಫೇಮಸ್ ಹಾಡು ಶ್ರೀವಲ್ಲಿ… ಈ ಹಾಡು ಸಿನಿಮಾದಲ್ಲಿ ಒಂದು ಹೈಲೇಟ್… ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಸದ್ದು ಮಾಡ್ತಿರುವ ಈ ಹಾಡಿನ ಕ್ರೇಜ್ ಇನ್ನೂವರೆಗೂ ಒಂಚೂರೂ ಕಡಿಮೆಯಾಗಿಲ್ಲ.. ಅದ್ರಲ್ಲೂಹಾಡಿನಲ್ಲಿ ಅಲ್ಲು ಸ್ಪೆಪ್ಸ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.. ಅಂದ್ಹಾಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಪಾಫೀಸ್ ನಲ್ಲಿ ಧೂಳೆಬ್ಬಿಸಿ ಸೂಪರ್ ಹಿಟ್ ಎನಿಸಿಕೊಮಡಿದ್ದು , ಈಗ ಅಮೆಜಾನ್ ಪ್ರೈಮ್ ನಲ್ಲಿ ಸಕ್ಸಸ್ ಫುಲ್ ಆಗಿ ಸ್ಟ್ರೀಮ್ ಆಗ್ತಿದೆ..
ಆದ್ರೆ ಈ ಶ್ರೀವಲ್ಲಿ ಹಾಡಿನ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಗೊತ್ತಾಗಿದೆ… ಅದೇನಂದ್ರೆ ಈ ಶ್ರೀವಲ್ಲಿ ಹೆಸರಿನ ಹಾಡು ಮೊದಲಿಗೆ ಶ್ರೀದೇವಿ ಎಂದಾಗಿತ್ತು.. ಆನಂತರ ಬದಲಾಯಿಸಲಾಗಿದೆ.. ಆದ್ರೆ ಶ್ರೀದೇವಿ ಎಂದು ಕೇವಲ ಹಿಂದಿಗಷ್ಟೇ ಲಿರಿಕ್ಸ್ ಬದಲಾಯಿಸಲಾಗಿತ್ತಂತೆ. ಹೌದು… ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿರುವ ‘ಶ್ರೀವಲ್ಲಿ’ ಹಾಡು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿದೆ. ತೆಲುಗಿನಲ್ಲಿ ಜನಪ್ರಿಯ ಹಾಡುಗಾರ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ. ಆದರೆ ತೆಲುಗಿಗಿಂತ ಹಿಂದಿ ಭಾಷೆಯ ಶ್ರೀವಲ್ಲಿ ಹಾಡು ಹೆಚ್ಚು ಹಿಟ್ ಆಗಿದೆ. ಯೂಟ್ಯೂಬ್ ನಲ್ಲಿ ಶ್ರೀವಲ್ಲಿ ಹಿಂದಿ ವರ್ಷನ್ ಹಾಡನ್ನು ಒಂದು ತಿಂಗಳಲ್ಲಿ 25 ಕೋಟಿಗೂ ಹೆಚ್ಚು ಬಾರಿ ನೋಡಲಾಗಿದೆ. ಆದ್ರೆ ತೆಲುಗು ಹಾಡನ್ನು 4 ಕೋಟಿ ಬಾರಿ ಮಾತ್ರವೇ ನೋಡಲಾಗಿದೆ.
ಆದ್ರೆ ಮೊದಲಿಗೆ ಹಿಂದಿ ವರ್ಷನ್ ನಲ್ಲಿ ಈ ಹಾಡು ಶ್ರೀವಲ್ಲಿ ಎಂದಲ್ಲ ಬದಲಿಗೆ ಶ್ರೀದೇವಿ ಎಂದು ರೆಕಾರ್ಡ್ ಮಾಡಲಾಗಿತ್ತಂತೆ. ಹಿಂದಿಯಲ್ಲಿ ಶ್ರೀವಲ್ಲಿ ಹಾಡನ್ನು ಜಾವೇದ್ ಅಲಿ ಹಾಡಿದ್ದು, ಅವರೇ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಬದಲಾವಣೆ ಮಾಡಿದ್ದು ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಎಂದೂ ಸಹ ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಶ್ರೀವಲ್ಲಿ ಎಂದರೆ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಆದರೆ ಉತ್ತರ ಭಾರತದವರಿಗೆ ಶ್ರೀವಲ್ಲಿ ಹೆಸರು ಕನೆಕ್ಟ್ ಆಗುವುದಿಲ್ಲ ಅದರ ಬದಲು ಶ್ರೀದೇವಿ ಇಟ್ಟರೆ ಸರಿಯಾಗಬಹುದು… ಅದು ಅಲ್ಲದೇ ಶ್ರೀದೇವಿ ಬಾಲಿವುಡ್ನ ಪ್ರಮುಖ ನಟಿಯರಲ್ಲಿ ಒಬ್ಬರು ಎಂದು ದೇವಿಶ್ರೀ ಪ್ರಸಾದ್ ಸಲಹೆ ಕೊಟ್ಟದ್ದರಂತೆ… ಅಂತೆಯೇ ಜಾವೇದ್ ಅವರು ಸಹ ಶ್ರೀದೇವಿ ಎಂದೇ ಹಾಡಿ ಅದನ್ನು ರೆಕಾರ್ಡ್ ಸಹ ಮಾಡಿದ್ದರಂತೆ.. ಆದರೆ ಅದು ಹಾಡಿಗೆ ಸರಿಯಾಗಿ ಹೊಂದಿಕೆ ಆಗಲಿಲ್ಲ. ಹೀಗಾಗಿ ದೇವಿ ಶ್ರೀಪ್ರಸಾದ್ ಅವರೂ ಸಹ ಶ್ರೀದೇವಿ ಹೆಸರು ಬೇಡ ಎಂದು ಶ್ರೀವಲ್ಲಿಯ ಹೆಸರಲ್ಲೇ ಹಾಡು ಹಾಡಿದರಂತೆ.
ಅಂದ್ಹಾಗೆ ಈ ಹಾಡು ಜಾವೇದ್ ಅವರನ್ನ ಫೇಮಸ್ ಮಾಡಿದ ಹಾಡು ಎಂದಿದ್ದಾರೆ.. ನಾನು ಅಂಡರ್ರೇಟೆಡ್ ಗಾಯಕನಾಗಿದ್ದೆ. ನನಗೆ ದೊಡ್ಡ ಮಟ್ಟದ ಗುರುತು ಹೆಸರು ತಂದುಕೊಟ್ಟ ಹಾಡಿದು ಎಂದಿದ್ದಾರೆ… ಅಲ್ಲದೇ ಇಳಯರಾಜ ಅವರಿಗಾಗಿ ಹಾಡುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅವರಿಗಾಗಿ ಹಾಡು ಹಾಡಲು ಬಂದಿದ್ದೆ… ಆದರೆ ಅದೇ ಸಮಯದಲ್ಲೇ ದೇವಿ ಶ್ರೀಪ್ರಸಾದ್ ಅವರೂ ನನ್ನ ಕರೆದರು.. ಏನು ಮಾಡುವುದೆಂಬ ಗೊಂದಲದಲ್ಲಿ ನಾನಿದ್ದೆ… ಆಗ ದೇವಿಶ್ರೀ ಪ್ರಸಾದ್ ಅವರು ನೀನು ನಮಗಾಗಿ ಹಾಡು, ಮಧ್ಯದಲ್ಲಿ ಇಳಯರಾಜಾ ಅವರು ಕರೆ ಮಾಡಿದರೆ ನೀನು ರೆಕಾರ್ಡಿಂಗ್ ಬಿಟ್ಟು ಹೊರಟು ಬಿಡು ಎಂದಿದ್ದರು. ನಾನೂ ಒಪ್ಪಿಕೊಂಡೆ ಕೆಲವೇ ಗಂಟೆಗಳಲ್ಲಿ ಹಾಡು ಹಾಡಿ ರೆಕಾರ್ಡ್ ಮಾಡಿಮುಗಿಸಿದ್ವಿ ಎಂದಿದ್ದಾರೆ… ಅಂದ್ಹಾಗೆ ಕನ್ನಡದ ,ತೆಲುಗು , ತಮಿಳು , ಮಲಯಾಳಂನಲ್ಲಿ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಹಿಂದಿಯಲ್ಲಿ ಜಾವೇದ್ ಅಲಿ ಹಾಡಿದ್ದಾರೆ.