ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ ಕಳುಹಿಸಸಿದ ಆರೋಪ : ಆಡಂ ಬಿದ್ದಪ್ಪ ಅರೆಸ್ಟ್
ಬೆಂಗಳೂರು : ನಟಿ ಸಂಜನಾ ಗಲ್ರಾನಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿರುವ ಆರೋಪದ ಮೇರೆಗೆ ಬೆಂಗಳೂರಿನ ಇಂದಿರಾನಗರ ಠಾಣಾ ಪೊಲೀಸರು ಆಡಂ ಬಿದ್ದಪ್ಪ ಅವರನ್ನ ಬಂಧಿಸಿದ್ದಾರೆ. ಆಡಂ ಬಿದ್ದಪ್ಪ, ಕೊರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರ.
ಬಂಧಿತ ಆಡಂ, ಕಳೆದ ಫೆಬ್ರವರಿ 25 ರ ರಾತ್ರಿ ಸಂಜನಾ ಗಲ್ರಾನಿ ಅವರಿಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದರಂತೆ. ಈ ಕುರಿತು ನಟಿ ಸಂಜನಾ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇಂದಿರಾ ನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಜೊತೆಗೆ ವಾಟ್ಸಪ್ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದರು. ಈ ದೂರಿನ ಆಧಾರದ ಮೇಲೆ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆಡಂ ಬಿದ್ದಪ್ಪರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಆದ್ರೆ ವಿಚಾರಣೆ ವೇಳೆ ಆಡಂ ಬಿದ್ದಪ್ಪ, ಸಂಜನಾ ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸಂಜನಾ ಅವರಿಗೆ ಯಾವುದೇ ಮೆಸೇಜ್ ಮಾಡಿಲ್ಲ ಎಂದು ವಾದಿಸಿದ್ದಾರೆ. ಇತ್ತ ನಟಿ ಸಂಜನಾ ನೀಡಿರುವ ದಾಖಲೆಗಳ ಆಧಾರದಲ್ಲಿ ಇಂದಿರಾ ನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.