Chethan | ಗನ್ ಮ್ಯಾನ್ ಭದ್ರತೆ ನೀಡುವಂತೆ ನಟ ಚೇತನ್ ಮನವಿ
ಬೆಂಗಳೂರು : ತಮಗೆ ನೀಡಲಾಗಿದ್ದ ಗನ್ ಮ್ಯಾನ್ ಹಿಂಪಡೆದಿರುವುದರಿಂದ ಮತ್ತೆ ಗನ್ ಮ್ಯಾನ್ ಭದ್ರತೆ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಮಾಡಿ ನಟ ಚೇತನ್ ಮನವಿ ಮಾಡಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಚೇತನ್ ಅವರಿಗೆ ಗನ್ ಮ್ಯಾನ್ ನೀಡಲಾಗಿತ್ತು.
ಆದ್ರೆ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಹೊರ ಬಂದ ಮೇಲೆ ಚೇತನ್ ಗೆ ನೀಡಿದ್ದ ಗನ್ ಮ್ಯಾನ್ ಸೆಕ್ಯೂರಿಟಿಯನ್ನ ವಾಪಸ್ ಪಡೆಯಲಾಗಿದೆ.
ಹೀಗಾಗಿ ಚೇತನ್ ಅವರು ಗೃಹ ಸಚಿವರನ್ನ ಭೇಟಿ ಮಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರುತ್ತಲೇ ಇದೆ.
ಕೋಮುವಾದದ ಪರ ಮಾತನಾಡುವವರಿಗೆ ಜನಪ್ರತಿನಿಧಿಗಳಿಗೆ ಗನ್ ಮ್ಯಾನ್ ಪ್ರೊಟೆಕ್ಷನ್ ನೀಡ್ತಾರೆ.
ಆದ್ರೆ ಸತ್ಯ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಇಲ್ಲ. ಹೀಗಾಗಿ ನಾನು ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಯಾರು ಬೆದರಿಕೆ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್, ಇವರಿಂದಲೇ ಬೆದರಿಕೆ ಬರುತ್ತಿದೆ ಎಂದು ಹೇಳಲಾಗುವುದಿಲ್ಲ.
ಸೋಶಿಯಲ್ ಮೀಡಿಯಾ ಸೇರಿದಂತೆ ಹಲವೆಡೆಯಿಂದ ಬೆದರಿಕೆ ಬರುತ್ತಿದೆ. ಇದರ ಒಂದು ಪಟ್ಟಿಯನ್ನ ನೀಡುತ್ತೇನೆ ಎಂದಿದ್ದಾರೆ .
Chetan-appeals-to-gunman-security-services cinibazaar