Puneeth Rajkumar : ಥಿಯೇಟರ್ ಗಳ ಮುಂದೆ ಜೇಮ್ಸ್ ಜಾತ್ರೆ…!!!
ಇಂದು ವಿಶ್ವದಾದ್ಯಂತ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದ್ದು , ಥಿಯೇಟರ್ ಗಳ ಮುಂದೆ ಅಪ್ಪು ಅಭಿಮಾನಿಗಳು ಜಾತ್ರೆ ಮಾಡ್ತಿದ್ದಾರೆ.. ಎಷ್ಟೋ ಥಿಯೇಟರ್ ಗಳ ಮುಂದೆ ಅನ್ನದಾನ ನಡೆಯುತ್ತಿದ್ರೆ , ಇನ್ನೂ ಹೆಲವೆಡೆ ಬಡವರಿಗೆ ಫ್ರೀ ಟಿಕೆಟ್ಸ್ ಕೊಡಿಸ್ತಿದ್ದಾರೆ ಫ್ಯಾನ್ಸ್.
ಯಾವ ರಸ್ತೆ ನೋಡು ಅಪ್ಪುಮಯವಾಗಿದೆ.. ರಾಜ್ಯಾದ್ಯಂತ ಎಲ್ಲಾ ಥಿಯೇಟರ್ ಗಳ ಮುಂದೆ ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ರೆ , ಕೆಲವೆಡೆ ಭಾವುಕರಾಗುತ್ತಾ ಕಣ್ಣೀರಿಟ್ಟದದ್ದಾರೆ.. ಜೇಮ್ಸ್ ರಿಲೀಸ್ ಆದ ಎಲ್ಲಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಬ್ಬದಂತೆ ಸ್ವಾಗತ ಕೋರಿದ್ದಾರೆ.
ಥಿಯೇಟರ್ ಗಳ ಮುಂದೆ ಕುಳಿದು ಕುಪ್ಪಳಿಸುತ್ತಿದ್ದಾರೆ. ಆದ್ರೆ ಥಿಯೇಟರ್ ಒಳಗಡೆ ಸಿನಿಮಾ ನೋಡಿದ ಅಭಿಮಾನಿಗಳು ಭಾವಕರಾಗಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ಕಂಡು ಅನೇಕರು ಕಣ್ಣೀರು ಹಾಕುತ್ತಿದ್ದಾರೆ. ಸಿನಿಮಾ ನೋಡಿ ಭಾವಕರಾಗಿರುವ ಪುನೀತ್ ಅಭಿಮಾನಿಗಳು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇತ್ತ ಕರ್ನಾಟಕದಾದ್ಯಂತ ಜೇಮ್ಸ್ ಸಿನಿಮಾ ಜಾತ್ರೆ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಜೇಮ್ಸ್ ಸಿನಿಮಾವನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಮೂಲೇ ಮೂಲೆಯಲ್ಲಿಯೂ ಅಪ್ಪು ಕಟೌಟ್ ಗಳು ರಾರಾಜಿಸುತ್ತಿವೆ.