Nayanatara : ಜೆಂಟಲ್ಮ್ಯಾನ್ 2 ನಲ್ಲಿ ಲೇಡಿ ಸೂಪರ್ ಸ್ಟಾರ್…!!
ಕೆಲವೇ ದಿನಗಳ ಹಿಂದೆ ಜಂಟಲ್ಮ್ಯಾನ್ 2 ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ನಯನತಾರಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿತ್ತು..
ಜಂಟಲ್ಮ್ಯಾನ್ 2 ನಲ್ಲಿ ನಾಯಕಿಯಾಗಿ ನಟಿಸಲು ಮಾತುಕತೆ ನಡೆಸುತ್ತಿರುವ ಮಾಲಿವುಡ್ ನಟಿ ನಯನತಾರಾ ಚಕ್ರವರ್ತಿ ಎಂದು ಮೂಲವೊಂದು ಈಗ ಖಚಿತಪಡಿಸಿದೆ.
ಈ ಸಿನಿಮಾದಲ್ಲಿ ಕಾಲಿವುಡ್ ನ ನಟ ನಟಿಸಲಿದ್ದಾರೆ ಎನ್ನಲಾಗಿದ್ದು. ಇದು ಅವರಿಗೆ ಚೊಚ್ಚಲ ಮಾಲಿವುಡ್ ಸಿನಿಮಾವಾಗಿರಲಿದೆ..
ನಯನತಾರಾ ತನ್ನ ಅಭಿನಯಕ್ಕಾಗಿ ಮಾಲಿವುಡ್ನಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೆಲ ವರ್ಷಗಳಿಂದ ಮಾಲಿವುಡ್ ನಿಂದ ಬ್ರೇಕ್ ಪಡೆದಿದ್ದ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಈಗ ಕಮ್ ಬ್ಯಾಕ್ ಕೊಡಬಹುದು ಎನ್ನಲಾಗ್ತಿದೆ..
ಚಿತ್ರದ ಬಗ್ಗೆ ಹೇಳುವುದಾದರೆ, ಜಂಟಲ್ಮ್ಯಾನ್ 2 ಪ್ರಸ್ತುತ ಪ್ರಾಥಮಿಕ ಹಂತದಲ್ಲಿದೆ. 1993 ರ ಬ್ಲಾಕ್ ಬಸ್ಟರ್ ಹಿಟ್ ಜಂಟಲ್ ಮ್ಯಾನ್ ನ ಸೀಕ್ವೆಲ್ ಈ ಸಿನಿಮಾ..