Neethu Shetty : ಬಾಡಿ ಶೇಮಿಂಗ್ ಮಾಡೋರಿಗೆ ಉಗಿದು ಉಪ್ಪಾಕಿದ ನೀತು ಶೆಟ್ಟಿ..!!
ಅನೇಕ ಸೆಲೆಬ್ರಿಟಿಇಗಳು , ಅದ್ರಲ್ಲೂ ನಟಿಯರು ಹಲಪವು ಬಾರಿ ಬಾಡಿ ಶೇಮಿಂಗ್ ಗೆ , ಕಲರ್ ಶೇಮಿಂಗ್ ಗೆ ಗುರಿಯಾಗಿದ್ದಾರೆ.. ಈ ವಿರುದ್ಧ ನಟಿಯಯರು ಧ್ವನಿ ಎತ್ತಿದ್ದಾರೆ.ತಾವು ಎದುರಿಸಿದ ಕಹಿ ಘಟನೆಗಳ ಬಗ್ಗೆ ಹಂಚಿಕೊಳ್ತಾರೆ.. ಅಂತೆಯೇ ಇದೀಗ ‘ಗಾಳಿಪಟ’ ನಟಿ ನೀತು ಶೆಟ್ಟಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ.. ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ..
ಪ್ರತಿ ಸಲವೂ ಚಾನೆಲ್ ವೊಂದರ ನನ್ನ ವಿಡಿಯೋ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಾಮೆಂಟ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೆ ಇರೋರು ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಯೋಗ್ಯರು. ಇವರ ಪ್ರಕಾರ ದುಂಡಗಿರುವವರು ತುಂಬಾ ‘ಮಜಾ’ ಮಾಡುವುದರಿಂದ ಹಾಗೆ ಆಗಿದ್ದಾರೆ. ಹಾಗಾಗಿ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ.
ಇವರ ಪ್ರಕಾರ ಪ್ಲಸ್ ಸೈಜ್ ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್, ಹುಟ್ಟಲ್ಲ. ಬ್ಯುಟಿಫುಲ್ ಅಂತ ಪರಿಗಣಿಸಬಾರದು. ಹಿಡಿಂಬಾ/ ರಾಕ್ಷಿಸಯಾಗೋಕೆ ಮಾತ್ರ ನಾವು ಲಾಯಕ್. ಪ್ಲಸ್ ಸೈಜ್ ನವರು ಜೀವನ ಪರ್ಯಂತ ದುಃಖದಲ್ಲಿ ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು.
ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಒಪಿನಿಯನ್ ಇರಲೇಬಾರದು. ಇದ್ರೆ, ಮೊದಲು ಸಣ್ಣ ಆಗು, ಆಮೇಲೆ ಮಾತಾಡು ಎನ್ನುತ್ತಾರೆ. ಪ್ಲಸ್ ಸೈಜ್ ಅವ್ರು ಧೈರ್ಯವಾಗಿ ಪಬ್ಲಿಕ್ನಲ್ಲಿ ಅಥವಾ ಟಿವಿಯಲ್ಲಿ ಬಿಂದಾಸ್ ಆಗಿ ಕಾಣಿಸ್ಕೊಂಡ್ರೆ , ಅವರ ಗಟ್ಸ್ ಬಗ್ಗೆ ಇವರಿಗೆ ಸಿಟ್ಟು ಬರುತ್ತೆ. ದಪ್ಪ ಇರೋವ್ರು ಆರೋಗ್ಯವಂತರಲ್ಲ ಅನ್ನೋದೇ ಫ್ಯಾಕ್ಟ್ ಅಂತ ನಂಬಿದ್ದಾರೆ. ತೆಳ್ಳಗಿರುವವರೆಲ್ಲ ಫಿಟ್ ಅಂಡ್ ಫೈನ್ ಅಂತ ಅಂದುಕೊಂಡಿರ್ತಾರೆ. ತೆಳ್ಳಗಿಲ್ದೇ ಇರುವವರನ್ನು ಪ್ರಾಣಿಗಳಿಗೆ ಹೋಲಿಸುವುದು ಇವರ ಹಕ್ಕು ಮಾಡಿಕೊಂಡಿರುತ್ತಾರೆ. ಪ್ಲಸ್ ಸೈಜ್ ಇರೋದ್ರಿಂದ ಅವಕಾಶ ವಂಚಿತರಾಗುವುದು ಸರಿಯಾಗೇ ಇದೆ ಅಂತ ಇವರಿಗನಿಸುತ್ತೆ.
ಇವರು ಈ ಸಮಾಜದ ‘FatPhobic’ ಜನ. ಇವರ ಯೋಚನೆಗಳು ತುಂಬಾನೇ ಹಳೆಯ ಕಾಲದ್ದು, ತುಕ್ಕು ಹಿಡಿದದ್ದು ಹಾಗೂ ತುಂಬಾ ವಿಷದಿಂದ ತುಂಬಿದೆ. ಇದು ಫ್ಯಾಟ್ ಫೋಬಿಯಾ ದ ವಿಶ್ಲೇಷಣೆ.. ಪ್ಲಸ್ ಸೈಜ್ ಜನರು ವಿಶ್ವದಾದ್ಯoತ ಈಗ ಅಡಗಿ ಕೂರ್ತಾ ಇಲ್ಲ. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್ ನಂತೇ ಬದುಕ್ತಾ ಇದ್ದಾರೆ
We are Here, We are Real, We are not Victims, WE WILL SHOW UP ಎಂದು ಬರೆದುಕೊಂಡಿದ್ದಾರೆ… ಅಷ್ಟೇ ಅಲ್ದೇ “ಈ ಫೋಟೋದಲ್ಲಿ ನನ್ನ ಪ್ರಕಾರ ನಾನು ಮುದ್ದಾಗಿಯೇ ಕಾಣಿಸ್ತಾ ಇದ್ದೀನಿ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ..