Pooja Hegde : ಪ್ರಭಾಸ್ ಜೊತೆಗಿನ ಜಗಳದ ವಿಚಾರ : ಪೂಜಾ ಹೆಗ್ಡೆ ಮಾತು..!!
ಪ್ರಭಾಸ್ ಅಭಿನಯದ ‘ರಾಧೆಶ್ಯಾಮ್ ಸಿನಿಮಾ’ ಇತ್ತೀಚಿಗೆ ರಿಲೀಸ್ ಆಗಿ ಉತ್ತಮ ಪ್ರದರ್ಶನವನ್ನ ಕಂಡಿದೆ.. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪ್ರಭಾಸ್ ಕೆಮಿಸ್ಟ್ರಿ ನೋಡಿದ್ರೆ ಯಾರೂ ಹೇಳೋದಕ್ಕೆ ಸಾಧ್ಯವೇ ಇಲ್ಲ.. ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅಂತ..
ಇವರಿಬ್ಬರ ನಡುವೆ ಸಿನಿಮಾದ ಶೂಟಿಂಗ್ ನಡುವೆಯೇ ಅಸಮಾಧಾನ ಉಂಟಾಗಿತ್ತು ಎಂದೇ ಹೇಳಲಾಗ್ತಿತ್ತು.. ಇದಕ್ಕೆ ಸಾಕ್ಷಿ ಎನ್ನುವಂತೆ , ಪ್ರಚಾರರ ಸಂದರ್ಶನಗಳಲ್ಲಿ ಇಬ್ಬರೂ ಸರಿಯಾಗಿ ಸಹಕರಿಸದೇ ಇರುವುದು, ಸರಿಯಾಗಿ ಮಾತನಾಡದೇ ಇದ್ದದ್ದೆಲ್ಲಾ ಕಂಡುಬಂದಿತ್ತು.. ಇದೀಗ ಸಿನಿಮಾ ರಿಲೀಸ್ ಆದ ಕೆಲ ದಿನಗಳ ನಂತರ ಈ ವಿಚಾರವಾಗಿ ಪೂಜಾ ಹೆಗ್ಡೆ ಮಾತನಾಡಿದ್ದಾರೆ..
ಇತ್ತೀಚೆಗೆ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರೋ ಪೂಜಾ
” ದುರದೃಷ್ಟವಶಾತ್ ಕೆಲವೊಮ್ಮೆ ನಕಾರಾತ್ಮಕತೆಯು ಮಾರಾಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಸತ್ಯವಾಗಿರದೇ ಇರಬಹುದು. ಆದರೂ ಜನರು ಅದರ ಬಗ್ಗೆಯೇ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ.. ಆದರೆ ನಾನು ಏನು ಮಾಡಬಲ್ಲೆನೋ ಅದು ಸಕಾರಾತ್ಮಕತೆಯಿಂದ ತುಂಬಿರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಸದಾ ಸಕಾರಾತ್ಮಕತೆ ಹಂಚಲು ಬಯಸುತ್ತೇನೆ.. ಅಲ್ಲಿ ಈಗಾಗಲೇ ತುಂಬಾ ನಕಾರಾತ್ಮಕತೆ ಇದೆ.. ಅದಕ್ಕೆ ಮತ್ತಷ್ಟನ್ನ ಸೇರಿಸಲು ನಾನು ಬಯಸುವುದಿಲ್ಲ. ನೆಗೆಟಿವಿಟಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ದೇ ಇರೋದು ನನ್ನ ಪ್ರಯತ್ನ”.. ಎಂದಿದ್ದಾರೆ..
ಅಂದ್ಹಾಗೆ ಪೂಜಾ ಹೆಗ್ಡೆ ಅವರಿಗೆ ಸಮಯಪ್ರಜ್ಞೆ ಇಲ್ಲ.. ಪ್ರೊಫೆಷನಲಿಸಂ ಇಲ್ಲ ಎಂದು ಪ್ರಭಾಸ್ ಅವರು ಅಸಮಾದಾನ ಹೊರಹಾಕಿದ್ದೆ ಇವರಿಬ್ಬರ ನಡುವಿನ ಸಂಬಂಧ ಹದಗೆಡಲು ಕಾರಣವೆಂದು ಕೆಲ ದಿನಗಳಿಮದ ವದಂತಿ ಹರಿದಾಡ್ತಿತ್ತು..
ಆದ್ರೆ ರಾಧೆ ಶ್ಯಾಮ್ ನಿರ್ಮಾಣದ ಯುವಿ ಕ್ರಿಯೇಷನ್ಸ್ ಹೇಳಿಕೆಯನ್ನು ನೀಡಿತ್ತು.. ಅದರಲ್ಲಿ “ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಪ್ರಭಾಸ್ ಮತ್ತು ಪೂಜಾ ಹೆಡ್ಗೆ ಪರಸ್ಪರ ಗೌರವ ಮತ್ತು ಅಭಿಮಾನವನ್ನು ಹೊಂದಿದ್ದಾರೆ. ವಾಸ್ತವವಾಗಿ, ಅವರು ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಪೂಜಾ ಅವರು ಯಾವಾಗಲೂ ತನ್ನ ಚಿತ್ರೀಕರಣಕ್ಕೆ ಬಹಳ ಸಮಯಪ್ರಜ್ಞೆಯನ್ನು ಹೊಂದಿದ್ದಾರೆ. ಅವರು ಕೆಲಸ ಮಾಡುವುದು ತುಂಬಾ ಸುಲಭ. ಈ ವದಂತಿಗಳು ಕೇವಲ ಯಾರೋ ಒಬ್ಬರ ಕಲ್ಪನೆ.. ಈ ಜೋಡಿ ಮತ್ತು ಇಡೀ ತಂಡದ ನಡುವೆ ಎಲ್ಲವೂ ಚೆನ್ನಾಗಿದೆ” ಎಂದಿದ್ದರು..