ಶ್ರೀ ಸಂಭ್ರಮ ಸಾರಥ್ಯದಲ್ಲಿ ಯೂತ್ ಫುಲ್ ಎಂಟರ್ ಟೈನರ್
ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಸಿನಿಮಾ ಸಂಭ್ರಮ.
ರಂಗಭೂಮಿ ಕಲಾವಿದ ಶ್ರೀ ಸಂಭ್ರಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೊಸ ಪ್ರತಿಭೆಗಳಾದ ವೀರೇಂದ್ರ ಶೆಟ್ಟಿ, ಅಭಯ್ ವೀರ್, ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಸವಿತಾ ಚಿತ್ರದಲ್ಲಿ ನಟಿಸಿದ್ದಾರೆ.
ಸಂಭ್ರಮ ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಈ ಚಿತ್ರಕ್ಕೆ ಅದ್ಭುತ ಮ್ಯೂಸಿಕ್ ನೀಡಿದ್ದು, ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.
ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಂಭ್ರಮ ಸಿನಿಮಾದಲ್ಲಿ ಒಟ್ಟು 10 ಹತ್ತು ಹಾಡುಗಳಿದ್ದು, ಜಯಂತ್ ಕಾಯ್ಕಿಣಿ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಚಿನ್ಮಯ್ ಭಾವಿಕೆರೆ, ವೀರೇಂದ್ರ ಶೆಟ್ಟಿ, ಶ್ರೀ ಸಂಭ್ರಮ ಸಾಹಿತ್ಯದ ಹಾಡುಗಳು ಸಿನಿಮಾದಲ್ಲಿರಲಿವೆ.
ಸಿಂಕ್ ಸೌಂಡ್ ಬಳಸಿ ಸಿನಿಮಾವನ್ನು ಶೂಟ್ ಮಾಡಲಾಗಿದ್ದು, ವಿನಯ್ ಕುಮಾರ್ ಎಸ್ ವಿಕೆ, ಮಂಜುನಾಥ್ ಹೆಗ್ಡೆ ಕ್ಯಾಮೆರಾ ವರ್ಕ್, ತೇಜಸ್ ರಾಜ್ ಸಂಕಲನ ಸಿನಿಮಾಕ್ಕಿದ್ದು, ರಾಮಕೃಷ್ಣ ನಿಗಾದೆ, ನಾಗರಾಜ್ ಗುಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಯುಗಾದಿ ಹಬ್ಬಕ್ಕೆ ಮೊದಲ ಹಾಡು ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಕಹಳೆ ಮೊಳಗಿಸಲಿದೆ ಸಂಭ್ರಮ ಚಿತ್ರತಂಡ.sandalwood-kannada-films-cinibazaar