Uravashi Routela
ಬುರ್ಜ್ ಅಲ್ ಅರಬ್ ಮೇಲೆ ಪ್ರದರ್ಶನ ನೀಡಿದ ಮೊದಲ ಭಾರತೀಯ ಕಲಾವಿದೆ : ಊರ್ವಶಿ ಪಡೆದ ಸುಬಾರಿ ಸಂಭಾವನೆ..!!
ಬುರ್ಜ್ ಅಲ್ ಅರಬ್ ಮೇಲೆ ಪ್ರದರ್ಶನ ನೀಡಿದ ಮೊದಲ ಭಾರತೀಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಐರಾವತ ಬಡೆಗಿ , ಬಾಲಿವುಡ್ ನಟಿ ಊರ್ವಶಿ ರೌಟೇಲಾ ಪಾತ್ರರಾಗಿದ್ದಾರೆ..
ಬಾಲಿವುಡ್ನ ಯುವ ಸೂಪರ್ಸ್ಟಾರ್ ಊರ್ವಶಿ ರೌಟೇಲಾ ತಮ್ಮ ಇತ್ತೀಚೆಗಿನ ಸಾಧನೆಗಳ ಮೂಲಕ ಎಲ್ಲರೂ ಹೆಮ್ಮೆಪಡುವಂತೆ ಮಾಡ್ತಿದ್ದಾರೆ..
ಬಾಲಿವುಡ್ಗೆ ಕಾಲಿಟ್ಟಾಗಿನಿಂದ ಪ್ರತಿದಿನ ಯಶಸ್ಸಿನ ಮೆಟ್ಟಿಲು ಏರುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ..
ಎಕ್ಸ್ಪೋ 2020 ಪೆವಿಲಿಯನ್ನಲ್ಲಿ ಇತ್ತೀಚೆಗೆ ರಾಯಲ್ ಆಮಂತ್ರಣವನ್ನು ಪಡೆದ ನಟಿ, ಭಾರತದ ಸೌಂದರ್ಯವನ್ನು ಅನ್ವೇಷಿಸಿದರು. ಕಳೆದ ರಾತ್ರಿ ಎಮಿಗಲಾ ಅವಾರ್ಡ್ಸ್ಗೆ ಹಾಜರಾಗಿದ್ದ ಅವರು ಇತ್ತೀಚೆಗೆ ವಿಶ್ವ ಪ್ರಸಿದ್ಧ ಬುರ್ಜ್ ಅಲ್ ಅರಬ್ ನ ಮೇಲೆ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ..
ಭಾರತದ ಹೆಮ್ಮೆ ಮತ್ತು 2022 ರ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಊರ್ವಶಿ ಗುರುತಿಸಿಕೊಂಡಿದ್ದಾರೆ.
ನಟಿ ತಮ್ಮದೇ ಆದ ಹಾಡೊಂದನ್ನು ಹಾಡಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಮುಂದೆ ಪ್ರದರ್ಶನ ನೀಡಿದ್ದಾರೆ.. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯರೊಬ್ಬರು ಬುರ್ಜ್ ಅಲ್ ಅರಬ್ ಮೇಲೆ ಪ್ರದರ್ಶನ ನೀಡಿದ್ದು ಆ ಖ್ಯಾತಿ ಊರ್ವಶಿಗೆ ಸಲ್ಲಿದೆ..
ಅಂದ್ಹಾಗೆ ಇಲ್ಲಿ ಪ್ರದರ್ಶನಕ್ಕಾಗಿ ಊರ್ವಶಿಗೆ 5 ಕೋಟಿ. ರೂ ಸಿಕ್ಕಿದೆ ಎನ್ನಲಾಗಿದೆ.. ಈ ನಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವ ಅತ್ಯಂತ ದುಬಾರಿ ಭಾರತೀಯ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ.
ಊರ್ವಶಿ ಕೊನೆಯದಾಗಿ ಮಿಸ್ ಯೂನಿವರ್ಸ್ ಪೇಜೆಂಟ್ 2021 ರ ತೀರ್ಪುಗಾರರಾಗಿ ಕಾಣಿಸಿಕೊಂಡರು.. ಅಲ್ಲದೇ ಅತಿ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆ ಅವರದ್ದು.. ಮತ್ತು ಅರಬ್ ಸೂಪರ್ಸ್ಟಾರ್ ಮೊಹಮ್ಮದ್ ರಂಜಾನ್ ಜೊತೆಗೆ ಅವರ ಅಂತರರಾಷ್ಟ್ರೀಯ ಹಾಡು ‘ವರ್ಸೇಸ್ ಬೇಬಿ’ ಗಾಗಿ ಮೆಚ್ಚುಗೆಯನ್ನು ಪಡೆದರು. ಊರ್ವಶಿ ಶೀಘ್ರದಲ್ಲೇ ಜಿಯೋ ಸ್ಟುಡಿಯೋಸ್ನ ‘ಇನ್ಸ್ಪೆಕ್ಟರ್ ಅವಿನಾಶ್” ನಲ್ಲಿ ರಣದೀಪ್ ಹೂಡಾ ಅವರ ಜೊತೆಗೆ ತೆರ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಮರ್ಚೆಂಟ್ ಆಫ್ ವೆನಿಸ್ ಆಧಾರಿತ ವಿಲಿಯಂ ಷೇಕ್ಸ್ಪಿಯರ್ ದ್ವಿಭಾಷಾ ಥ್ರಿಲ್ಲರ್ ‘ಬ್ಲ್ಯಾಕ್ ರೋಸ್’ ನಲ್ಲಿ ಈ ನಟಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ, ಜೊತೆಗೆ ಸೂಪರ್ಹಿಟ್ ‘ತಿರುಟ್ಟು ಪಯಲೆ 2’ ನ ಹಿಂದಿ ರಿಮೇಕ್ ನಲ್ಲಿ ನಟಿಸಲಿದ್ದಾರೆ.
ಊರ್ವಶಿ ಶರವಣ ಜೊತೆಗೆ ಬಹುಭಾಷಾ ಚಿತ್ರ ‘ದಿ ಲೆಜೆಂಡ್’ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಲಿದ್ದಾರೆ. ಮತ್ತು ಜಿಯೋ ಸ್ಟುಡಿಯೋಸ್ ಮತ್ತು ಟಿ-ಸಿರೀಸ್ನೊಂದಿಗೆ ಮೂರು ಸಿನಿಮಾಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.